ಲಂಕನ್ ಬಂದರು ಸಮೀಪ ಶಬಹಂಗ್ ಹಡಗು ಮುಳುಗಿರುವುದು 
ವಿದೇಶ

ಅಜೆರ್ಬೈಜಾನ್ ಲಂಕನ್ ಬಂದರು ಸಮೀಪ ಮುಳುಗಿದ ಹಡಗು: ರಕ್ಷಿಸಲ್ಪಟ್ಟವರಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ

ಇಲ್ಲಿನ ಅಸ್ಟಾರಾ ಬಂದರು ಸಮೀಪ ಲಂಕರನ್ ಬಂದರು ಸಮೀಪ ಮುಳುಗಿ ಹೋಗುತ್ತಿದ್ದ ...

ಬಾಕು(ಅಜೆರ್ಬೈಜಾನ್): ಇಲ್ಲಿನ ಅಸ್ಟಾರಾ ಬಂದರು ಸಮೀಪ ಇರುವ ಲಂಕರನ್ ಬಂದರು ಹತ್ತಿರ ಹೋಗುತ್ತಿದ್ದ ಶಬಹಂಗ್ ಎಂಬ ಇರಾನ್ ಹಡಗಿನಲ್ಲಿದ್ದ ಇಬ್ಬರು ಭಾರತೀಯರನ್ನು ಇರಾನ್ ನ  ಉಳಿದ 7 ಸಿಬ್ಬಂದಿಗಳ ಜೊತೆ ರಕ್ಷಿಸಲಾಗಿದೆ ಎಂದು ಇರಾನ್ ಬಂದರು ಮತ್ತು ಮೆರಿಟೈಮ್ ಸಂಘಟನೆಯ ಉಪ ಮುಖ್ಯಸ್ಥರು ತಿಳಿಸಿದ್ದಾರೆ.
ಅಜೆರ್ಬೈಜಾನ್ ಬಂದರು ಅಕಾಡೆಮಿಯಿಂದ ಸಿಬ್ಬಂದಿಯನ್ನು ರಕ್ಷಿಸಲು ಸಹಾಯ ಕೋರಿ ಎರಡು ಹೆಲಿಕಾಪ್ಟರ್ ಮತ್ತು ಗಸ್ತುಪಡೆ ಹಡಗಿನ ನೆರವಿನಿಂದ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ಇರಾನ್ ನ ಸುದ್ದಿ ಸಂಸ್ಥೆ ಇರ್ನಾ ವರದಿ ಮಾಡಿದೆ. ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಅಜೆರಿ ನೀರಿನಲ್ಲಿ ಹಡಗು ಮುಳುಗಿ ಹೋಗಿದೆ.
ಸಮುದ್ರದಲ್ಲಿನ ನೀರು ಸೋರುವಿಕೆಯಿಂದ ಹಡಗು ಮುಳುಗಿತು ಎಂದು ಇರಾನ್ ನ ಅಧಿಕಾರಿ ಜಲಿಲ್ ಎಸ್ಲಮಿ ತಿಳಿಸಿದ್ದಾರೆ.
ಟೈಲ್ಸ್ ನ್ನು ಹಡಗಿನಲ್ಲಿ ಸಾಗಿಸಲಾಗುತ್ತಿತ್ತು. ಇರಾನ್ ನ ಅಂಜಲಿ ಬಂದರಿನಿಂದ ರಷ್ಯಾದ ಮಖಚ್ಕಲಾಕ್ಕೆ ಸಂಚಾರ ಬೆಳೆಸುತ್ತಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ Video ಡಿಲೀಟ್: Facebook ಮೇಲೆ ಗದಾ ಪ್ರಹಾರ, Mark Zuckerberg ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು! ಹೇಳಿದ್ದೇನು?

Repo Rate ಶೇ. 5.25 ಯಥಾಸ್ಥಿತಿ ಮುಂದುವರಿಕೆ, GDP ಬೆಳವಣಿಗೆ ಶೇ. 6.7: RBI ವಿತ್ತೀಯ ನೀತಿ ಪ್ರಕಟ

ಪ್ರಾಣ ಉಳಿಸಿದ ಹೀರೋಗೆ ಪ್ರವಾಹವೇ ಕಂಟಕ: ತನ್ನ ಲೈಫ್ ಜಾಕೆಟ್ ಕೊಟ್ಟು ಜೀವ ರಕ್ಷಿಸಿದ ತರಬೇತುದಾರನ ದುರಂತ ಸಾವು!

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

'ಸಾವು ಉತ್ತಮ': ಉದಯನಿಧಿ ಸ್ಟಾಲಿನ್ ಬಂಧನ ಬೆನ್ನಲ್ಲೇ ನಟಿ nivetha pethuraj ಪೋಸ್ಟ್ ವೈರಲ್!