ಕ್ರಿಕೆಟ್ ವಿಶ್ವಕಪ್: ಪಾಕ್ ವಿರುದ್ಧ ಭಾರತ ಮತ್ತೊಂದು ಸ್ಟ್ರೈಕ್ ಎಂದಿದ್ದ ಅಮಿತ್ ಶಾಗೆ ಪಾಕ್ ಸೇನಾ ವಕ್ತಾರರ ಪ್ರತಿಕ್ರಿಯೆ
ಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದ್ದನ್ನು ಗೃಹ ಸಚಿವ ಅಮಿತ್ ಶಾ ಪಾಕ್ ವಿರುದ್ಧದ ಮತ್ತೊಂದು ಸ್ಟ್ರೈಕ್ ಎಂದು ಹೇಳಿ, ನಮ್ಮ ತಂಡವನ್ನು
ಇಸ್ಲಾಮಾಬಾದ್: ಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದ್ದನ್ನು ಗೃಹ ಸಚಿವ ಅಮಿತ್ ಶಾ ಪಾಕ್ ವಿರುದ್ಧದ ಮತ್ತೊಂದು ಸ್ಟ್ರೈಕ್ ಎಂದು ಹೇಳಿ, ನಮ್ಮ ತಂಡವನ್ನು ಅಭಿನಂದಿಸಿದ್ದರು.
ಅಮಿತ್ ಶಾ ಅವರ ಅಭಿನಂದನಾ ಟ್ವೀಟ್ ವೈರಲ್ ಆಗತೊಡಗಿದೆ. ಈ ನಡುವೆ ಅಮಿತ್ ಶಾ ಅವರ ಟ್ವೀಟ್ ನ್ನು ಗಂಭೀರವಾಗಿ ಪರಿಗಣಿಸಿದಂತಿರುವ ಪಾಕಿಸ್ತಾನದ ಸೇನಾ ವಕ್ತಾರ ಅಸೀಫ್ ಘಫೂರ್, ಪ್ರತಿಕ್ರಿಯೆ ನೀಡಿದ್ದು, ಸ್ಟ್ರೈಕ್ ಗಳನ್ನು ಹಾಗೂ ಪಂದ್ಯಗಳನ್ನು ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.
Dear @AmitShah yes ur team won a match. Well played.
— Asif Ghafoor (@peaceforchange) June 17, 2019ಭಾರತದಿಂದ ಪಾಕಿಸ್ತಾನದ ಮೇಲೆ ಮತ್ತೊಂದು ಸ್ಟ್ರೈಕ್, ಫಲಿತಾಂಶ ಹಾಗೆಯೇ ಇದೆ. ಶುಭಾಶಯಗಳು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.
Two things with different denominators can’t be compared. So are strikes & match. If in doubt please see results of our Nowshera counter strikes & response to IAF violation on 27 Feb19 downing two Indian jets.
Stay Surprised. https://t.co/cY089VmYIeಘಫೂರ್ ತಮ್ಮ ವೈಯಕ್ತಿಕ ಖಾತೆಯಿಂದ ಅಮಿತ್ ಶಾಗೆ ಪ್ರತಿಕ್ರಿಯೆ ನೀಡಿದ್ದು, ಪ್ರೀತಿಯ ಅಮಿತ್ ಶಾ, ಹೌದು, ನಿಮ್ಮ ತಂಡ ಪಂದ್ಯವನ್ನು ಗೆದ್ದಿದೆ, ಚೆನ್ನಾಗಿ ಆಡಿದ್ದಾರೆ, ಆದರೆ ಸ್ಟ್ರೈಕ್ ಗಳನ್ನು ಪಂದ್ಯಗಳನ್ನು ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.