ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) 
ವಿದೇಶ

ಅಮೆರಿಕಾದ ವಸ್ತುಗಳ ಮೇಲೆ ಅಧಿಕ ತೆರಿಗೆ ಹೇರಿಕೆ ಹಿಂಪಡೆಯಿರಿ: ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಒತ್ತಾಯ

ಜಪಾನ್ ನ ಬಂದರು ನಗರಿ ಒಸಾಕಾದಲ್ಲಿ ಗುರುವಾರ ಜಿ20 ಶೃಂಗಸಭೆ ಆರಂಭಕ್ಕೆ ಮುನ್ನ ಭಾರತದ ಮುಂದೆ...

ಒಸಾಕಾ(ಜಪಾನ್): ಜಪಾನ್ ನ ಬಂದರು ನಗರಿ ಒಸಾಕಾದಲ್ಲಿ ನಾಳೆ ಜಿ20 ಶೃಂಗಸಭೆ ಆರಂಭಕ್ಕೆ ಮುನ್ನ ಭಾರತದ ಮುಂದೆ ಬೇಡಿಕೆಯಿಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಇತ್ತೀಚೆಗೆ ಅಮೆರಿಕದ ಮೇಲೆ ಹೇರಿರುವ ಅಧಿಕ ತೆರಿಗೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಷಯವನ್ನು ನಾಳೆ ಮತ್ತು ನಾಡಿದ್ದು ನಡೆಯಲಿರುವ ಜಿ20 ಶೃಂಗಸಭೆಯ ಹೊರಗೆ ಪ್ರಧಾನಿ ಮೋದಿಯವರ ಜೊತೆ ಪ್ರಸ್ತಾಪಿಸುವುದಾಗಿ ಕೂಡ ಹೇಳಿದ್ದಾರೆ. 
ನಿನ್ನೆ ಭಾರತಕ್ಕೆ ಆಗಮಿಸಿದ್ದ ಅಮೆರಿಕಾ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ವ್ಯಾಪಾರ-ವಹಿವಾಟಿಗೆ ಸಂಬಂಧಪಟ್ಟಂತೆ ಎರಡೂ ರಾಷ್ಟ್ರಗಳ ನಡುವೆ ಕೆಲವು ವಿಚಾರಗಲ್ಲಿ ಭಿನ್ನಾಭಿಪ್ರಾಯಗಳಿದ್ದು ಅವುಗಳನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದ್ದರು.
ಅಮೆರಿಕಾದಿಂದ ಆಮದು ಮಾಡಿಕೊಳ್ಳುವ ಸ್ಟೀಲ್ ಮತ್ತು ಅಲ್ಯೂಮಿನಿಯಂ ವಸ್ತುಗಳ ಮೇಲೆ ಅಧಿಕ ಆಮದು ತೆರಿಗೆ ವಿಧಿಸಿರುವುದಕ್ಕೆ ಪ್ರತಿಯಾಗಿ ಭಾರತ 25 ಅಮೆರಿಕಾ ವಸ್ತುಗಳ ಮೇಲೆ ಅಧಿಕ ರಫ್ತು ತೆರಿಗೆಯನ್ನು ಹೇರಿತ್ತು. ಅಂದರೆ ಅಮೆರಿಕಾಕ್ಕೆ ಭಾರತದಿಂದ ವಸ್ತುಗಳನ್ನು ಖರೀದಿಸುವಾಗ ದುಬಾರಿಯಾಗುತ್ತದೆ. ಈ ಅಧಿಕ ತೆರಿಗೆ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಡೊನಾಲ್ಡ್ ಟ್ರಂಪ್ ಕಳೆದೊಂದು ವರ್ಷದಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. 
ಈ ಮಧ್ಯೆ ಇಂದು ಜಪಾನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶಿಂಜೊ ಅಬೆ ಜೊತೆಗೆ ಮೊದಲ ಸಭೆ ನಡೆಸಲಿದ್ದಾರೆ. ನಾಳೆ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಮುಖಾಮುಖಿ ಭೇಟಿಯಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೋಹನ್ ಲಾಲ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; SRK, ವಿಕ್ರಾಂತ್ ಮಾಸ್ಸೆ ಹಾಗೂ ರಾಣಿ ಮುಖರ್ಜಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪ್ರದಾನ!

'ಭಾರತ ವಿರುದ್ಧ ಗೆಲ್ಲಬೇಕಿದ್ರೆ ಪಾಕ್ ಸೇನಾ ಮುಖ್ಯಸ್ಥರೇ ಬ್ಯಾಟ್ ಹಿಡೀಬೇಕು': PCB ವಿರುದ್ಧ Imran Khan ಗರಂ!

KRSನಲ್ಲಿ 5 ದಿನ ‘ಕಾವೇರಿ ಆರತಿ’: ಸೆ.26ಕ್ಕೆ DCM ಡಿ.ಕೆ ಶಿವಕುಮಾರ್ ಉದ್ಘಾಟನೆ

Bengaluru: 'ನನ್ ಗಂಡ ನಪುಂಸಕ.. 2 ಕೋಟಿ ರೂ ಕೊಡ್ಸಿ...'; ನವ ವಿವಾಹಿತೆ ಬೇಡಿಕೆ! ಆದ್ರೆ ಗಂಡನಿಂದಲೇ FIR

ಧರ್ಮಸ್ಥಳ ಪ್ರಕರಣ: ಅಗತ್ಯವಿದ್ದರೆ ಚಿನ್ನಯ್ಯ ಕುಟುಂಬಕ್ಕೆ ರಕ್ಷಣೆ ನೀಡಲಾಗುವುದು- ಪರಮೇಶ್ವರ; Video

SCROLL FOR NEXT