ವಿದೇಶ

ನಾಳೆಯಿಂದ ಜಿ-20 ಶೃಂಗಸಭೆ: ಜಪಾನ್ ಪಿಎಂ ಶಿಂಜೋ ಅಬೆ ಜತೆ ಪ್ರಧಾನಿ ಮೋದಿ ಭೇಟಿ

Sumana Upadhyaya
ಒಸಾಕಾ: ಜಪಾನ್ ದೇಶದ ಬಂದರು ನಗರಿ ಒಸಾಕಾದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಜಿ20 ಶೃಂಗಸಭೆ ನಡೆಯಲಿದ್ದು ಸಭೆಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಪಾನ್ ಪ್ರಧಾನಿ ಶಿಂಜೊ ಅಬೆಯವರನ್ನು ಭೇಟಿ ಮಾಡಿದರು.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ಶಿಂಜೊ ಅಬೆ, ಮತ್ತೊಮ್ಮೆ ಅಭೂತಪೂರ್ವ ಗೆಲುವು ಸಾಧಿಸಿ ಪ್ರಧಾನಿಯಾಗಿರುವುದಕ್ಕೆ ಅಭಿನಂದನೆಗಳು. ಮುಂದಿನ ಬಾರಿ ಭಾರತಕ್ಕೆ ಭೇಟಿ ನೀಡುವುದು ನನ್ನ ಸರದಿಯಾಗಿದ್ದು ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ಶಿಂಜೊ ಅಬೆಯವರ ಹಾರೈಕೆ ಮಾತುಗಳಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ. ನಾನು ಗೆದ್ದಾಗ ಫೋನ್ ನಲ್ಲಿ ಅಭಿನಂದನೆ ಸಲ್ಲಿಸಿದವರಲ್ಲಿ ಮೊದಲ ಸ್ನೇಹಿತ ನೀವೇ. ನೀವು ನನಗೆ ನೀಡಿದ ಅದ್ದೂರಿ ಸ್ವಾಗತಕ್ಕೆ ನಾನು ಕೃತಜ್ಞನಾಗಿದ್ದೇನೆ. ಜಪಾನ್ ಸರ್ಕಾರ ಕೂಡ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದೆ ಎಂದರು.
SCROLL FOR NEXT