ಸಂಗ್ರಹ ಚಿತ್ರ 
ವಿದೇಶ

ಪಾಕ್ ಬಣ್ಣ ಮತ್ತೆ ಬಯಲು: ತನ್ನದೇ ಉಗ್ರನನ್ನು ಹತ್ಯೆಗೈದು ಭಾರತದ ಕಡೆ ಕೈತೋರಿಸಿದ್ದೇಕೆ? ವಿಡಿಯೋದಲ್ಲಿ ಏನಿದೆ!

ಕಾಶ್ಮೀರದ ವಿಲಾಯ್ ಅಲ್ ಹಿಂದ್(ಡಬ್ಲ್ಯೂಎಎಚ್) ಸಂಘಟನೆ ಸದಸ್ಯ ಕೊಲೆಯಾಗಿದ್ದು ಭಾರತೀಯ ಏಜೆನ್ಸಿಯಿಂದಲ್ಲ. ಪಾಕಿಸ್ತಾನದ ಉಗ್ರರಿಂದ ಎಂದು ತಿಳಿಸುವ ವಿಡಿಯೋವೊಂದನ್ನು ಉಗ್ರನೊರ್ವ...

ಬೆಂಗಳೂರು: ಕಾಶ್ಮೀರದ ವಿಲಾಯ್ ಅಲ್ ಹಿಂದ್(ಡಬ್ಲ್ಯೂಎಎಚ್) ಸಂಘಟನೆ ಸದಸ್ಯ ಕೊಲೆಯಾಗಿದ್ದು ಭಾರತೀಯ ಏಜೆನ್ಸಿಯಿಂದಲ್ಲ. ಪಾಕಿಸ್ತಾನದ ಉಗ್ರರಿಂದ ಎಂದು ತಿಳಿಸುವ ವಿಡಿಯೋವೊಂದನ್ನು ಉಗ್ರನೊರ್ವ ಹರಿಬಿಟ್ಟಿದ್ದಾನೆ.
ಐಎಸ್ ಸಂಘಟನೆಯ ಉಗ್ರನನ್ನು ಪಾಕಿಸ್ತಾನದ ಉಗ್ರ ಸಂಘಟನೆಗಳಾದ ಹಿಜ್ಬುಲ್ ಮುಜಾಯಿದ್ದೀನ್ ಹಾಗೂ ಲಷ್ಕರ್ ಇ ತೊಯ್ಬಾದ ಉಗ್ರರೇ ಕೊಂದು ಹಾಕಿರುವುದಾಗಿ ಐಎಸ್ ನ ವಕ್ತಾರನೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಅಷ್ಟೇ ಅಲ್ಲ ಇದರಲ್ಲಿ ಭರಾತೀಯ ಏಜೆನ್ಸಿಯ ಕೈವಾಡ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇಸ್ಲಾಮಿಕ್ ಸ್ಟೇಟ್(ಐಎಸ್) ಪ್ರಮುಖ ಪ್ರಾಂತೀಯ ಸಂಘಟನೆಯಾದ ಕಾಶ್ಮೀರದ ವಿಲಾಯ್ ಅಲ್ ಹಿಂದ್ ಸಂಘಟನೆಯ ಉಗ್ರ ಆದಿಲ್ ರೆಹಮಾನ್ ದಾರ್ ನನ್ನು ಪಾಕ್ ಪೋಷಿತ ಉಗ್ರ ಸಂಘಟನೆಗಳೆ ಹತ್ಯೆಗೈದು ಆತನಿಂದ ಎಕೆ 47 ಗನ್ ಕಿತ್ತುಕೊಂಡಿವೆ ಎಂದು ವಿಲಾಯ್ ಅಲ್ ಹಿಂದ್ ನ ವಕ್ತಾರ ಆರೋಪಿಸಿದ್ದಾರೆ.
ವಿಲಾಯ್ ಅಲ್ ಹಿಂದ್ ವಕ್ತಾರ 5 ನಿಮಿಷಗಳ ವಿಡಿಯೋದಲ್ಲಿ ಹಿಜ್ಬುಲ್ ಹಾಗೂ ಲಷ್ಕರ್ ನ ಮೂವರು ಉಗ್ರರು ದಾರ್ ನನ್ನು ಕೊಂದಿರುವ ಬಗ್ಗೆ ವಿಡಿಯೋದಲ್ಲಿ ತಿಳಿಸಿದ್ದು ಈ ಬಗ್ಗೆ ಪಾಕ್ ಸುಳ್ಳು ಹೇಳಿರುವ ಕುರಿತು ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಕತೀಬ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT