ದೆಹಲಿಗೆ ಸಂಜೋತಾ ಎಕ್ಸ್ಪ್ರೆಸ್ ರೈಲು ಸೇವೆ ಪುನಾರಂಭಿಸಿದ ಪಾಕ್
ಲಾಹೋರ್ ನಿಂದ ದೆಹಲಿಗೆ ತೆರಳುವ ಸಂಜೋತಾ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಸೋಮವಾರದಿಂದ ಪಾಕಿಸ್ತಾನ ಪುನಾರಂಭಿಸಿದೆ.
ಲಾಹೋರ್: ಲಾಹೋರ್ ನಿಂದ ದೆಹಲಿಗೆ ತೆರಳುವ ಸಂಜೋತಾ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಸೋಮವಾರದಿಂದ ಪಾಕಿಸ್ತಾನ ಪುನಾರಂಭಿಸಿದೆ.
ಸಂಜೋತಾ ಎಕ್ಸ್ಪ್ರೆಸ್ ರೈಲು ಪ್ರತಿ ಸೋಮವಾರ ಮತ್ತು ಗುರುವಾರ ಪಾಕಿಸ್ತಾನದಿಂದ ಹೊರಡುತ್ತದೆ. ನಿನ್ನೆ ದೆಹಲಿಯಿಂದ ಲಾಹೋರ್ ಗೆ ಆಗಮಿಸಿದ್ದ ಸಂಜೋತಾ ಎಕ್ಸ್ ಪ್ರೆಸ್ ಇಂದು ಲಾಹೋರ್ ನಿಂದ ದೆಹಲಿ ತೆರಳುತ್ತಿದೆ.
ಸುಮಾರು 150 ಪ್ರಯಾಣಿಕರನ್ನು ಹೊತ್ತ ಸಂಜೋತಾ ಎಕ್ಸ್ ಪ್ರೆಸ್ ಲಾಹೋರ್ ನಿಂದ ಭಾರತಕ್ಕೆ ತೆರಳುತ್ತಿದೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಫೆ. 14ರ ಪುಲ್ವಾಮಾ ದಾಳಿಯ ನಂತರ ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದ ಹಿನ್ನಲೆಯಲ್ಲಿ ಭಾರತ ಫೆಬ್ರವರಿ 28ರಂದು ಈ ರೈಲು ಸೇವೆಯನ್ನು ರದ್ದುಪಡಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.