ವಿದೇಶ

ನನ್ನ ಅಧಿಕಾರಾವಧಿಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಪಾಕ್ ಜೈಷ್ ನೆರವು ಪಡೆದಿತ್ತು: ಫರ್ವೇಜ್ ಮುಷರಫ್‌

Raghavendra Adiga
ನವದೆಹಲಿ: ತಾವು ಅಧಿಕಾರದಲ್ಲಿದ್ದಾಗ ಉಗ್ರ ಸಂಘಟನೆ ಜೈಷ್-ಇ-ಮೊಹಮ್ಮದ್ ವಿರುದ್ಧ ಯಾವ ಕ್ರಮ ತೆಗೆದುಕೊಂಡಿಲ್ಲ, ಭಾರತದ ವಿರುದ್ಧ ಹೋರಾಡಲು ಪಾಕ್ ಐಎಸ್‌ಐ  ಜತೆ ಮಸೂದ್ ಅಝರ್ ನೇತೃತ್ವದ ಸಂಘಟನೆ ಕೈಜೋಡಿಸಿದ್ದ ಕಾರಣ ಯಾವ ಕ್ರಮ ಜರುಗಿಸಲು ಆಗಿಲ್ಲ ಎಂದು ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್‌ ಹೇಳಿದ್ದಾರೆ.
ಪಾಕಿಸ್ತಾನದ ಹಮ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮುಷರಫ್‌ ಈ ಹೇಳಿಕೆ ನೀಡಿದ್ದಾರೆ. ಭಾರತ ಹಾಗೂ ಪಾಕ್ ಎರಡೂ ರಾಷ್ಟ್ರಗಳು ಪ್ರತೀಕಾರ ತಿರಿಸಿಕೊಳ್ಳುವುದಕ್ಕಾಗಿ ಬಾಂಬ್ ದಾಳಿಗಳನ್ನು ನಡೆಸುತ್ತಿದ್ದವು. ಜೆಯುಡಿ, , ಲಷ್ಕರ್ ಸಂಘಟನೆಗಳು ಪಾಕಿಸ್ತಾನದ ಅತ್ಯುತ್ತಮ ಎನ್ ಜಿಒಗಳಾಗಿದ್ದು ಪಾಕ್ ನಲ್ಲಿ ಯಾವ ಭಯೋತ್ಪಾದಕ ಕೃತ್ಯದಲ್ಲಿ ಸಹ ಇವು ತೊಡಗಿಲ್ಲ ಎಂದೂ ಅವರು ಹೇಳೀದ್ದಾರೆ.
ಆದರೆ ಮಸೂದ್ ನೇತೃತ್ವದ ಜೆಇಎಂ ತನ್ನ ಮೇಲೆ ಸಹ ಆತ್ಮಾಹುತಿ ದಾಳಿ ಮಾಡಿತ್ತು. ಇದೀಗ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಜೆಇಎಂ ಉಗ್ರ ಸಂಘಟನೆ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಮುಷರಫ್ ಹೇಳಿದ್ದಾರೆ.
ಪುಲ್ವಾಮಾ ದಾಳಿ ನಂತರದ ದಿನಗಳಲ್ಲಿ ಪಾಕ್ ನಲ್ಲಿರುವ ಉಗ್ರರ ಹುಟ್ಟಗಿಸಬೇಕೆಂದು ಅಂತರಾಷ್ಟ್ರೀಯ ಒತ್ತಡಗಳು ಬಂದ ಹಿನ್ನೆಲೆ ಹಫೀಜ್ ಸಯೀದ್‌ ನೇತೃತ್ವದ ಜೆಯುಡಿ ಹಾಗೂ ಫಲಾಹ್ ಇ ಇನ್ಸಾನಿಯತ್ ಫೌಂಡೇಷನ್‌ ಅನ್ನು ನಿಷೇಧಿತ ಸಂಘಟನೆಯಡಿ ಸೇರಿಸುವುದಾಗಿ ಪಾಕಿಸ್ತಾನ ಹೇಳಿದೆ.ಮಸೂದ್ ಅಜರ್ ಸಹೋದರ ಅಬ್ದುಲ್ ರೌಫ್‌ ಅಸ್ಘರ್ ಅಲಿಯಾಸ್ ಮುಫ್ತಿ ಅಬ್ದುರ್‌ ರೌಫ್‌ರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
SCROLL FOR NEXT