ಅಂತೋಣಿ ಮವೆರೋಪೋಲೋಲಸ್ 
ವಿದೇಶ

ಇಥೋಪಿಯಾ ವಿಮಾನ ದುರಂತ: 2 ನಿಮಿಷ ತಡವಾಗಿದ್ದಕ್ಕೆ ಗ್ರೀಕ್ ವ್ಯಕ್ತಿಯ ಪ್ರಾಣ ಉಳಿಯಿತು!

ನಾನು ಎರಡು ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ಫ್ಲೈಟ್ ಮಿಸ್ ಆಯ್ತು. ಆದರೆ ಪ್ರಾಣ ಉಳಿಯಿತು ಎಂದು 157 ಜನರನ್ನು ಬಲಿ ಪಡೆದ ಇಥಿಯೋಪಿಯಾ ಬೋಯಿಂಗ್ 737...

ಅಥೆನ್ಸ್: ನಾನು ಎರಡು ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ಫ್ಲೈಟ್ ಮಿಸ್ ಆಯ್ತು. ಆದರೆ ಪ್ರಾಣ ಉಳಿಯಿತು ಎಂದು 157 ಜನರನ್ನು ಬಲಿ ಪಡೆದ ಇಥಿಯೋಪಿಯಾ ಬೋಯಿಂಗ್ 737 ವಿಮಾದಲ್ಲಿ ಪ್ರಯಾಣಿಸಬೇಕಾಗಿದ್ದ ಗ್ರೀಕ್ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ನಿನ್ನೆ ಇಥಿಯೋಪಿಯಾ ರಾಜಧಾನಿ ಆಡಿಸ್ ಅಬಬಾ ಬಳಿ ಬೋಯಿಂಗ್ 737 ವಿಮಾನ ಪತನಗೊಂಡು 157 ಪ್ರಯಾಣಿಕರು ಸಜೀವ ದಹನವಾಗಿದ್ದರು. 
ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೋಫ್ಟು ಬಳಿ ವಿಮಾನ ಪತನಗೊಂಡಿತ್ತು. 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕೀಡಾಗಿತ್ತು. ಒಟ್ಟು 33 ದೇಶಗಳ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. 
ಭಾನುವಾರ ಪತನವಾದ ಇಥಿಯೋಪಿಯನ್ ಏರ್ಲೈನ್ಸ್'ನ ಬೋಯಿಂಗ್ ವಿಮಾನದ 150ನೇ ಪ್ರಯಾಣಿಕ ತಾವಾಗಿದ್ದು, ಅದರಲ್ಲಿ ಪ್ರಯಾಣಿಸಿದ್ದರೆ ಖಂಡಿತಾ ಪ್ರಾಣ ಹೋಗುತ್ತಿತ್ತು. ಆದರೆ, ಬೋರ್ಡಿಂಗ್ ಸಂದರ್ಭದಲ್ಲಿ 2 ನಿಮಿಷ ತಡವಾಗಿ ತೆರಳಿದ್ದರಿಂದ ಫ್ಲೈಟ್ ಮಿಸ್ ಆಯ್ತು. ಆದರೆ ಅದರಿಂದ ನನ್ನ ಜೀವ ಉಳೀತು ಎಂದು ಈ ಘಟನೆ ಬಳಿಕ ಗ್ರೀಕ್ ವ್ಯಕ್ತಿ ಅಂತೋಣಿ ಮವೆರೋಪೋಲೋಲಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಅವನನ್ನು ಹಾಳು ಮಾಡಿದ್ದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್'!: ವೈಭವ್ ಸೂರ್ಯವಂಶಿ ಕುರಿತು ಗಂಭೀರ್‌ ವಿರುದ್ಧ ವಿಶ್ವಕಪ್‌ ವಿಜೇತ ಆಟಗಾರ ಕಿಡಿ

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ