ವಿದೇಶ

ಅಮೆರಿಕದಲ್ಲಿ ವೀಸಾಗಾಗಿ ನಕಲಿ ಮದುವೆ ಮಾಡಿಸುತ್ತಿದ್ದ ಭಾರತೀಯನ ಬಂಧನ

Lingaraj Badiger
ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ವೀಸಾ ಪಡೆಯಲು ನಕಲಿ ಮದುವೆ ಮಾಡಿಸುತ್ತಿದ್ದ ಭಾರತೀಯ ಮೂಲದ ದಲ್ಲಾಳಿಯನ್ನು ಬಂಧಿಸಲಾಗಿದ್ದು, 20 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಬಂಧಿತ ವ್ಯಕ್ತಿಯನ್ನು 47 ವರ್ಷದ ರವಿ ಬಾಬು ಕೊಳ್ಳ ಎಂದು ಗುರುತಿಸಲಾಗಿದ್ದು, ಫ್ಲೋರಿಡಾದ ಪನಾಮ ಸಿಟಿಯ ನಿವಾಸಿ ಎನ್ನಲಾಗಿದೆ.
ಅಮೆರಿಕದಲ್ಲಿಯೇ ಉಳಿದುಕೊಳ್ಳಲು ಅಲ್ಲಿನ ಪ್ರಜೆಗಳೊಂದಿಗೆ ಭಾರತೀಯರ ನಕಲಿ ಮದುವೆ ಮಾಡಿಸುತ್ತಿದ್ದ ರವಿ ಬಾಬು ವಿಚಾರಣೆ ಪೂರ್ಣಗೊಂಡಿದ್ದು, ಮೇ 22ಕ್ಕೆ ಅಮೆರಿಕ ಕೋರ್ಟ್ ಹೌಸ್ ಶಿಕ್ಷೆ ಪ್ರಕಟಿಸಲಿದೆ.
ನಕಲಿ ಮದುವೆ ಮತ್ತು ವೀಸಾ ವಂಚನೆಗಾಗಿ ರವಿಬಾಬು ಸಹಾಯಕಿ, 40 ವರ್ಷದ  ಕ್ರಿಸ್ಟರ್ ಕ್ಲೌಡ್ ಗೆ ಈಗಾಗಲೇ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ರವಿಬಾಬು ಫೆಬ್ರವರಿ  2017ರಿಂದ ಆಗಸ್ಟ್ 2018ರ ವರೆಗೆ 80 ನಕಲಿ ಮದುವೆಗಳನ್ನು ಮಾಡಿಸಿದ್ದು, ಅಕ್ರಮ ಹಣ ವಹಿವಾಟು ಸಹ ನಡೆದಿದೆ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದಾರೆ.
SCROLL FOR NEXT