ವಿದೇಶ

ಕರ್ತಾರ್ಪುರ ಬಳಿಕ ಶಾರದಾ ಪೀಠ ಕಾರಿಡಾರ್ ಗೆ ಪಾಕಿಸ್ತಾನ ಅನುಮತಿ

Raghavendra Adiga
ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದ ಪ್ರಾಚೀನ ಹಿಂದೂ ದೇವಸ್ಥಾನ ಮತ್ತು ಸಾಂಸ್ಕೃತಿಕ ಸ್ಥಳವಾದ ಶಾರದಾ ಪೀಠವನ್ನು  ಭಾರತೀಯ ಹಿಂದೂ ಧರ್ಮೀಯರು ಸಂದರ್ಶಿಸಲು ಅನುಕೂಲವಾಗುವಂತೆ  ಕಾರಿಡಾರ್ ಸ್ಥಾಪಿಸಲು ಪಾಕಿಸ್ತಾನ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ ಎಂದು ಮಾದ್ಯಮ ವರದಿ ಹೇಳಿವೆ.
ಶಾರದಾ ಫೀಠ  ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಶಾರದಾ ಎಂಬ ಗ್ರಾಮದಲ್ಲಿರುವ ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳವಾಗಿದೆ. ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್ಪುರ್ ಗುರುದ್ವಾರಕ್ಕೆ ಕಾರಿಡಾರ್ ಯೋಜನೆ ಪ್ರಾರಂಭಗೊಂಡಿರುವ ಬೆನ್ನಲ್ಲೇ ಈಗ ಶಾರದಾ ಪೀಠಕ್ಕೆ ಸಹ ಕಾರಿಡಾರ್ ನಿರ್ಮಾಣ ಮಾಡಲು ಪಾಕ್ ಅನುಮತಿಸಿದೆ.
ಭಾರತ ಸರ್ಕಾರ ಈ ಸಂಬಂಧ ಇದಾಗಲೇ ಪಾಕಿಸ್ತಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ದೇವಾಲಯದ ಕಾರಿಡಾರ್ ತೆರೆಯಲು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಒಪ್ಪಿದೆ ಎಂದು ಮೂಲಗಳು ಹೇಳಿವೆ
ಇನ್ನು ಪಾಕಿಸ್ತಾನದ ವಶದಲ್ಲಿರುವ ಶಾರದಾ ಪೀಠಕ್ಕೆ ಕಾಶ್ಮೀರ ಪಂಡಿತರು ಸೇರಿ ಭಾರತೀಯ ಹಿಂದೂ ಬಾಂಧವರಿಗೆ ಸಂದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಶೃಂಗೇರಿ ಜಗದ್ಗುರುಗಳು  ಇತ್ತೀಚೆಗೆ ಪತ್ರ ಬರೆದಿದ್ದರು
SCROLL FOR NEXT