ವಿದೇಶ

ಆಫ್ಘಾನಿಸ್ತಾನ ನೆಲವನ್ನು ಭಾರತ ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ: ಅಮೆರಿಕಾ

Sumana Upadhyaya
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಯನ್ನು ನಡೆಸಲು ಆಫ್ಘನ್ ನೆಲವನ್ನು ಭಾರತ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅಮೆರಿಕಾ ಹೇಳಿದೆ.
ನೀವು ಹೇಳುವ ಆರೋಪಕ್ಕೆ ಸರಿಯಾದ ಸಾಕ್ಷ್ಯಾಧಾರಗಳಿಲ್ಲ. ಆದರೆ ಯಾವುದೇ ರಾಷ್ಟ್ರಗಳು ಭಯೋತ್ಪಾದನೆಗೆ ಬೆಂಬಲ ನೀಡಬಾರದು ಎಂಬುದು ನಮ್ಮ ನೀತಿಯಾಗಿದೆ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕಾದ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್ ಹೇಳಿದ್ದಾರೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯುನ್ ವರದಿ ಮಾಡಿದೆ.
ದೇಶದಲ್ಲಿ ತೊಂದರೆ ಸೃಷ್ಟಿಸಲು ಭಾರತ ಆಫ್ಘನ್ ನೆಲವನ್ನು ಬಳಸಿಕೊಳ್ಳುತ್ತಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ವೆಲ್ಸ್ ಇಸ್ಲಾಮಾಬಾದ್ ನಲ್ಲಿರುವ ಅಮೆರಿಕಾ ರಾಯಭಾರಿಗೆ ಉತ್ತರಿಸುತ್ತಿದ್ದರು.
SCROLL FOR NEXT