ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಪಟ್ಟಾಭಿಷೇಕಕ್ಕೆ ಮುನ್ನ ಭದ್ರತಾ ಮುಖ್ಯಸ್ಥೆಯನ್ನು ವಿವಾಹವಾದ ಥಾಯ್ ರಾಜ: ರಾಣಿಯನ್ನಾಗಿ ಘೋಷಣೆ!

ಮಹಾ ವಾಜಿರಲಾಂಗ್ ಕಾರ್ನ್ ಥಾಯ್ಲೆಂಡ್ ದೊರೆಯಾಗಿ ಇದೇ ಶನಿವಾರ ಪಟ್ಟಾಭಿಷೇಕಿತರಾಗುತ್ತಿದ್ದು ಇದಕ್ಕೂ ಮುನ್ನ ಭದ್ರತಾ ಪಡೆಯ ಮುಖ್ಯಸ್ಥೆಯನ್ನು ವಿವಾಹವಾಗಿ ಆಕೆಯನ್ನು ಮನೆತನ ರಾಣಿಯಾಗಿ...

ಮಹಾ ವಾಜಿರಲಾಂಗ್ ಕಾರ್ನ್-ಸುತಿದಾ
Vishwanath S
Updated On : 2 May 2019, 1:05 am
ಬ್ಯಾಂಕಾಕ್: ಮಹಾ ವಾಜಿರಲಾಂಗ್ ಕಾರ್ನ್ ಥಾಯ್ಲೆಂಡ್ ದೊರೆಯಾಗಿ ಇದೇ ಶನಿವಾರ ಪಟ್ಟಾಭಿಷೇಕಿತರಾಗುತ್ತಿದ್ದು ಇದಕ್ಕೂ ಮುನ್ನ ಭದ್ರತಾ ಪಡೆಯ ಮುಖ್ಯಸ್ಥೆಯನ್ನು ವಿವಾಹವಾಗಿ ಆಕೆಯನ್ನು ಮನೆತನ ರಾಣಿಯಾಗಿ ಘೋಷಿಸಿದ್ದಾರೆ.
2016ರ ಅಕ್ಟೋಬರ್ ನಲ್ಲಿ ಥಾಯ್ಲೆಂಡ್ ರಾಜ ಭೂಮಿಬೋಲ್ ಅದುಲ್ಯದೇಜ್ ನಿಧನರಾಗಿದ್ದು ಮೂರು ವರ್ಷಗಳ ಬಳಿಕ ಕಳೆದ ಶನಿವಾರ ಭೂಮಿಬೋಲ್ ಅವರ ಪುತ್ರ ಮಹಾ ವಾಜಿರಲಾಂಗ್ ಕಾರ್ನ್ ಅವರು ಥಾಯ್ಲೆಂಡ್ ಮಹಾರಾಜನಾಗಿ ಪಟ್ಟಾಭಿಷೇಕಿತರಾಗಲಿದ್ದಾರೆ.
66 ವರ್ಷದ ರಾಜ ಮಹಾ ವಾಜಿರಲಾಂಗ್ ಕಾರ್ನ್ ಅವರು 40 ವರ್ಷದ ಸುತಿದಾ ಅವರನ್ನು ವಿವಾಹವಾಗಿದ್ದು ಇದೀಗ ಅವರನ್ನು ಮಹಾರಾಣಿಯಾಗಿ ಘೋಷಿಸಿದ್ದಾರೆ. 

Advertisement

Advertisement

ಥಾಯ್ ಏರ್ ವೇಸ್ ನಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುತಿದಾ ಅವರು 2013ರಲ್ಲಿ ರಾಜನ ಭದ್ರತಾ ಪಡೆಯಲ್ಲಿ ಕಮಾಂಡೋ ಆಗಿ ಸೇರಿಕೊಂಡಿದ್ದರು. 
ರಾಜ ಮಹಾ ವಾಜಿರಲಾಂಗ್ ಅವರು ಇದಕ್ಕೂ ಮೊದಲು ಮೂರು ಮದುವೆಯಾಗಿದ್ದು ಇದು ನಾಲ್ಕನೇ ಮದುವೆ. 2014ರಲ್ಲಿ ಅವರು ಮೂರನೇ ಹೆಂಡತಿಗೆ ವಿಚ್ಛೇದನ ನೀಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments