ವಿದೇಶ

ಚೀನಾ: ಉದ್ಯೋಗದಿಂದ ಬರುವ ಆರೋಗ್ಯ ಸಮಸ್ಯೆಗಳು ಉಲ್ಬಣ

Srinivas Rao BV
ಉದ್ಯೋಗಗಳಿಂದ ಎದುರಾಗುವ ಆರೋಗ್ಯ ಸಮಸ್ಯೆಗಳು ಚೀನಾದಲ್ಲಿ ಹೆಚ್ಚುತ್ತಿದ್ದು, 2018 ರ ಅಂತ್ಯಕ್ಕೆ ಬರೊಬ್ಬರಿ 1 ಮಿಲಿಯನ್ ನಷ್ಟು ಔದ್ಯೋಗಿಕ ರೋಗಗಳು ವರದಿಯಾಗಿವೆ. 
ವರದಿಯಾಗಿರುವ ಪ್ರಕರಣಗಳ ಪೈಕಿ ಶೇ.90 ರಷ್ಟು ನ್ಯುಮೋಕೋನೊಸಿಸ್ (ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆ) ಎಂದು ತಿಳಿದುಬಂದಿದೆ. 
ಚೀನಾ ಸರ್ಕಾರದ ಮಾಹಿತಿ ಕಚೇರಿಯಿಂದ ಈ ಅಂಶ ಬಹಿರಂಗವಾಗಿದ್ದು, ಚೀನಾದಲ್ಲಿ  25 ಮಿಲಿಯನ್ ನೌಕರರು ಕೆಲಸ ಮಾಡುವ ಪ್ರದೇಶಗಳಿಂದ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದು, ಈ ಪೈಕಿ ನ್ಯುಮೋಕೋನೊಸಿಸ್ ಪ್ರಚಲಿತ ಆರೋಗ್ಯ ಸಮಸ್ಯೆಯಾಗಿದೆ. 
ಧೂಳು ಹಾಗೂ ಸಣ್ಣ ಕಣಗಳನ್ನು ಉಸಿರಾಡುವುದರಿಂದ ಸಂಭವಿಸುವ ಸಮಸ್ಯೆ ನ್ಯುಮೋಕೋನೊಸಿಸ್ ಆಗಿದ್ದು, ಅತ್ಯಂತ ಅಪಾಯಕಾರಿ ಶ್ವಾಸಕೋಶದ ಸಮಸ್ಯೆಯಾಗಿದೆ. 
ನ್ಯುಮೋಕೋನೊಸಿಸ್ ನಿಂದಾಗಿ ರೋಗಿಗಳು ಅಪಾರ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿದ್ದು, ಬಡತನ ಎದುರಿಸುವಂತಾಗಿದೆ. ಈಗ ಎಚ್ಚೆತ್ತುಕೊಂಡಿರುವ ಚೀನಾ, ನೌಕರರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ. 
SCROLL FOR NEXT