ಚಿನ್ನದ ಶೌಚಾಲಯ 
ವಿದೇಶ

ಚಿನ್ನದ ಟಾಯ್ಲೆಟ್‌ಗೆ 9 ಕೋಟಿ ಬೆಲೆಯ 40 ಸಾವಿರ ವಜ್ರಗಳ ಬಳಕೆ! ಇದನ್ನು ಬಳಸುವ ಅವಕಾಶ ನಿಮಗೂ ಇದೀಯಾ ನೋಡಿ?

ಚಿನ್ನದ ಟಾಯ್ಲೆಟ್‌ ನಿರ್ಮಿಸಿರುವ ಉದ್ಯಮಿಯೊಬ್ಬ ಅದಕ್ಕೆ 9 ಕೋಟಿ ಬೆಲೆಯ 40 ಸಾವಿರ ವಜ್ರಗಳನ್ನು ಬಳಸಿ ಹೊಸ ವಿನ್ಯಾಸದ ಶೌಚಾಲಯ ನಿರ್ಮಿಸಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಾಂಘೈ(ಚೀನಾ): ಚಿನ್ನದ ಟಾಯ್ಲೆಟ್‌ ನಿರ್ಮಿಸಿರುವ ಉದ್ಯಮಿಯೊಬ್ಬ ಅದಕ್ಕೆ 9 ಕೋಟಿ ಬೆಲೆಯ 40 ಸಾವಿರ ವಜ್ರಗಳನ್ನು ಬಳಸಿ ಹೊಸ ವಿನ್ಯಾಸದ ಶೌಚಾಲಯ ನಿರ್ಮಿಸಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬ್ರಿಟನ್ನಿನ ಬ್ಲೆನ್ ಹೆಮ್ ಅರಮನೆಯಲ್ಲಿ ಸುಮಾರು 12.78 ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣದಲ್ಲಿ ಶೌಚಾಲಯ ನಿರ್ಮಿಸಿದ್ದು ಈ ಹಿಂದೆ ಸುದ್ದಿಯಾಗಿತ್ತು. ಇದೀಗ ಇದಕ್ಕೆ ಉದ್ಯಮಿಯೊಬ್ಬ ಸೆಡ್ಡು ಹೊಡೆದಿದ್ದು ಅದಕ್ಕಿಂತ ದುಬಾರಿ ಶೌಚಾಲಯವನ್ನು ನಿರ್ಮಿಸಿದ್ದಾನೆ. 

ಹಾಂಕಾಂಗ್ ಮೂಲದ ಚಿನ್ನದ ವ್ಯಾಪಾರಿಯೊಬ್ಬ ಈ ಶೌಚಾಲಯ ರೆಡಿ ಮಾಡಿದ್ದು ಅದನ್ನು ತನ್ನ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾನೆ. ಇನ್ನು ಶೌಚಾಲಯದ ಸುತ್ತಾ ಬುಲೆಟ್ ಪ್ರೂಫ್ ಗ್ಲಾಸ್ ಭದ್ರತೆ ಹಾಕಲಾಗಿದೆ. 

ಇದನ್ನು ಕೇವಲ ಪ್ರದರ್ಶನಕ್ಕೆ ಮಾತ್ರ ಇಡಲಾಗಿದ್ದು ಇದನ್ನು ಬಳಸುವ ಅವಕಾಶ ಇಲ್ಲವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ