ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ 
ವಿದೇಶ

ಕರ್ತಾರ್ ಪುರ್ ಸಾಹಿಬ್ ಗೆ ಬಸ್ ನಲ್ಲಿ ತೆರಳುವಾಗ ಅಮರೀಂದರ್ ಸಿಂಗ್, ಇಮ್ರಾನ್ ಖಾನ್ ನಡೆಸಿದ ಚರ್ಚೆ ಏನು?

ಐತಿಹಾಸಿಕ ಕರ್ತಾರ್ ಪುರ ಕಾರಿಡಾರ್  ಉದ್ಘಾಟನಾ ವೇಳೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪರಸ್ಪರ ಭೇಟಿಯಾಗಿದ್ದಾರೆ

ಕರ್ತಾರ್ ಪುರ: ಐತಿಹಾಸಿಕ ಕರ್ತಾರ್ ಪುರ ಕಾರಿಡಾರ್  ಉದ್ಘಾಟನಾ ವೇಳೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪರಸ್ಪರ ಭೇಟಿಯಾಗಿದ್ದಾರೆ. ಕರ್ತಾರ್ ಪುರ್ ಸಾಹಿಬ್ ಗೆ ಇಬ್ಬರೂ ಒಂದೇ ಬಸ್ ನಲ್ಲಿ ಪ್ರಯಾಣಿಸಿದ್ದು, ಈ ಕಿರು ಅವಧಿಯಲ್ಲಿ ಇವರಿಬ್ಬರೂ ಏನನ್ನು ಮಾತನಾಡಿದ್ದಾರೆ ಎಂಬುದು ಜನಸಾಮಾನ್ಯರ ತೀವ್ರ ಕುತೂಹಲ ಕೆರಳಿಸಿದೆ. 

ಕ್ರಿಕೆಟ್ ಅಂದರೇ ಸಾಮಾನ್ಯವಾಗಿ ಪ್ರತಿಯೊಬ್ಬ ಭಾರತ ಹಾಗೂ ಪಾಕಿಸ್ತಾನಿಯರಲ್ಲೂ ಒಂದು ರೀತಿಯ ಭಾವಾನಾತ್ಮಕ ಸಂಬಂಧ ಬೆಸದಿರುತ್ತದೆ. ಆದರೆ,  ಈ ಬಸ್ ನಲ್ಲಿ ಅಮರೀಂದರ್ ಸಿಂಗ್ ಹಾಗೂ ಇಮ್ರಾನ್ ಖಾನ್  ಕುಟುಂಬದ ನಡುವೆ  ಒಂದು ರೀತಿಯ ಬಾಂಧವ್ಯವೇರ್ಪಟ್ಟಿದೆ. ಈ ಹಿಂದೆ ಭೇಟಿಯಾಗದಿದ್ದರೂ,ವೈಯಕ್ತಿಕವಾಗಿ ಗೊತ್ತಿರದಿದ್ದರೂ ಇಬ್ಬರೂ ಒಟ್ಟಿಗೆ ಪ್ರಯಾಣಿಸುವ ಮೂಲಕ ವಿಶೇಷ ಸಂಪರ್ಕ ವೇರ್ಪಟ್ಟಿದೆ.

ಇಮ್ರಾನ್ ಖಾನ್ ಅವರನ್ನು ಕ್ರಿಕೆಟ್ ಅಂಗಳದಲ್ಲಿ ನೋಡಿದ್ದಾಗಿ ಕಿರು ಅವಧಿಯಲ್ಲಿ ಅಮರೀಂದರ್ ಸಿಂಗ್ ಇಮ್ರಾನ್ ಸಿಂಗ್ ಹೇಳಿದ್ದಾರೆ. ಆದಾಗ್ಯೂ, ಕ್ರಿಕೆಟ್ ಜೊತೆಗೆ ಆಳವಾದ ಭಾವನಾತ್ಮಕ ಸಂಪರ್ಕ ಹೊಂದಿರುವುದಾಗಿ ಮುಖ್ಯಮಂತ್ರಿ ನೆನಪು ಮಾಡಿಕೊಂಡಿದ್ದಾರೆ. 

 ಇಮ್ರಾನ್ ಖಾನ್ ಅವರ ಅಂಕಲ್  ಜಹಂಗೀರ್ ಖಾನ್,  ಪಾಟಿಯಾಲಾದಲ್ಲಿ  ಮೊಹಮ್ಮದ್ ನಿಸಾರ್, ಲಾಲಾ ಅಮರನಾಥ್, ವೇಗಿ ಅಮರ್ ಸಿಂಗ್,  ವಾಜಿರ್ ಆಲಿ, ಅಮಿರ್ ಅಲಿಯೊಂದಿಗೆ ಕ್ರಿಕೆಟ್  ಆಡಿದ್ದಾಗಿ ಅಮರೀಂದರ್ ತಿಳಿಸಿದ್ದಾರೆ. 

1934-35ರಲ್ಲಿ ಅಮರೀಂದರ್ ಹಾಗೂ ಮಹಾರಾಜ ಯಾದುವೀಂದರ್ ಸಿಂಗ್ ನಾಯಕತ್ವದಲ್ಲಿನ  ಭಾರತ ಹಾಗೂ ಪಾಟಿಯಾಲದ ತಂಡದಲ್ಲಿ ಈ ಏಳು ಮಂದಿ ಆಟಗಾರರು ಪ್ರಮುಖರಾಗಿದ್ದರು ಎಂದು ಕ್ರಿಕೆಟ್ ಕುರಿತ ಸ್ವಲ್ಪ ಮಾಹಿತಿಯನ್ನು ಇಮ್ರಾನ್ ಜೊತೆಗೆ ಅಮರೀಂದರ್ ಸಿಂಗ್ ಹಂಚಿಕೊಂಡಿದ್ದಾರೆ. 

ಐದು ನಿಮಿಷಕ್ಕೂ ಕಡಿಮೆ ಅವಧಿಯ ಪ್ರಯಾಣ ಇದಾಗಿತ್ತು. ಆದರೆ, ಇಬ್ಬರೂ ನಾಯಕರ ನಡುವಿನ  ಅಸಮಾಧಾನವನ್ನು ತೊಡೆದು ಹಾಕಿದ ಕ್ರಿಕೆಟ್ ಗೆ ಧನ್ಯವಾದ ಹೇಳಬೇಕಾಗಿದೆ.  ಇದಕ್ಕೂ ಮುನ್ನ ಅಮರೀಂದರ್ ಸಿಂಗ್ ನೇತೃತ್ವದಲ್ಲಿನ ನಿಯೋಗವನ್ನು ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರು ಬರಮಾಡಿಕೊಂಡರು. 

ಕ್ರಿಕೆಟ್ ಗೆ ಇರುವ ಈ ಅದ್ಬುತ ಶಕ್ತಿಯಂತೆ ಮುಂದೊಂದು ದಿನ ಭಾರತ ಹಾಗೂ ಪಾಕಿಸ್ತಾನ ನಡುವಣ ಭಿನ್ನಾಭಿಪ್ರಾಯಗಳು ಬಗೆಹರಿದು, ಉಭಯ ದೇಶಗಳ ನಡುವಣ ಕ್ರೀಡಾಸ್ಪೂರ್ತಿಯೊಂದಿಗೆ ಕ್ರೀಡೆಗಳು ನಡೆಯುವಂತಾಗಲು ಕರ್ತಾರ್ ಪುರ ಕಾರಿಡಾರ್ ನೆರವಾಗಲಿದೆ ಎಂಬಂತಹ ವಿಶ್ವಾಸವನ್ನು ಅಮರೀಂದರ್ ಸಿಂಗ್ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT