ವಿದೇಶ

ಕಾಶ್ಮೀರಕ್ಕೆ ನಾವು ಉಪಗ್ರಹದಿಂದ ಇಂಟರ್ ನೆಟ್ ಕೊಡ್ತೀವಿ: ಟ್ರೋಲ್ ಆದ ಪಾಕ್ ಸಚಿವ!

Vishwanath S

ಇಸ್ಲಾಮಾಬಾದ್: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆ ಸ್ಧಗಿತಗೊಳಿಸಿರುವುದಿಂದ ಆಕ್ರೋಶಗೊಂಡಿರುವ ಪಾಕಿಸ್ತಾನದ ಸಚಿವರೊಬ್ಬರು ಪಾಕಿಸ್ತಾನದ ಉಪಗ್ರಹಗಳ ಮೂಲಕ ಕಾಶ್ಮೀರಿಗರಿಗೆ ಅಂತರಜಾಲ ಸೇವೆ ಒದಗಿಸುವುದಾಗಿ ಹೇಳಿ ಭಾರೀ ಟ್ರೋಲ್ ಗೆ ಗುರಿಯಾಗಿದ್ದಾರೆ. 

ಭದ್ರತಾ ದೃಷ್ಟಿಯಿಂದ ಕಳೆದ ಮೂರು ತಿಂಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪಾಕಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ ಕಿಡಿಕಾರಿದ್ದಾರೆ. ಆದರೆ ಫವಾದ್ ಹೇಳಿಕೆಗೆ ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ. 

ಪಾಕಿಸ್ತಾನಕ್ಕೆ ಸ್ವತಃ ಉಪಗ್ರಹ ನಿರ್ಮಿಸುವ ಅಥವಾ ಹಾರಿ ಬಿಡುವ ಸಾಮರ್ಥ್ಯ ಹೊಂದಿಲ್ಲ. ಹೀಗಿರುವಾಗ ಅಸಾಧ್ಯವಾದ ಭರವಸೆ ನೀಡಿರುವುದಕ್ಕೆ ಟ್ರೋಲ್ ಮಾಡಲಾಗುತ್ತಿದೆ. 

ಈ ಹಿಂದೆ ಚಂದ್ರಯಾನ 2 ವೇಳೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯುವ ಮುನ್ನ ಸಂಪರ್ಕ ಕಡಿತಗೊಂಡಿತ್ತು. ಅದನ್ನೇ ತೋರಿಸಿ ಭಾರತ ವೈಫಲ್ಯವನ್ನು ಗೇಲಿ ಮಾಡಿ ಟ್ರೋಲ್ ಗುರಿಯಾಗಿದ್ದಾರೆ.

SCROLL FOR NEXT