ಅನಿತಾ ಆನಂದ್ 
ವಿದೇಶ

ಕೆನಡಾ ಸಂಪುಟದಲ್ಲಿ ಹಿಂದೂ ಮಹಿಳೆಗೆ ಸಚಿವ ಸ್ಥಾನ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೊಸದಾಗಿ ವಿಸ್ತರಿಸಿದ ತಮ್ಮ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಹಿಂದೂ ಮಹಿಳೆ ಅನಿತಾ ಇಂದಿರಾ ಆನಂದ್ ಅವರಿಗೆ ಸ್ಥಾನ ಕಲ್ಪಿಸಿದ್ದಾರೆ.

ಒಟ್ಟಾವಾ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೊಸದಾಗಿ ವಿಸ್ತರಿಸಿದ ತಮ್ಮ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಹಿಂದೂ ಮಹಿಳೆ ಅನಿತಾ ಇಂದಿರಾ ಆನಂದ್ ಅವರಿಗೆ ಸ್ಥಾನ ಕಲ್ಪಿಸಿದ್ದಾರೆ.

ಕೆನಡಾ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡ ಮೊದಲ ಹಿಂದೂ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಇಂದಿರಾ ಆನಂದ್ ಪಾತ್ರರಾಗಿದ್ದಾರೆ. ಅವರು, ಇತ್ತೀಚೆಗೆ ಕೆನಡಾ ಸಂಸತ್ತಿಗೆ ಆಯ್ಕೆಯಾಗಿದ್ದರು. 

ಇನ್ನು ಕೆನಡಾ ಸಂಪುಟದಲ್ಲಿ ಇನ್ನೂ ಮೂವರು ಇಂಡೋ-ಕೆನಡಿಯನ್ ಮಂತ್ರಿಗಳು ಇದ್ದು ಅವರೆಲ್ಲಾ ಸಿಖ್ಖ್ ಧರ್ಮೀಯರಾಗಿದ್ದಾರೆ.

ಅಕ್ಟೋಬರ್ ನಲ್ಲಿ ನಡೆದ ಫೆಡರಲ್ ಚುನಾವಣೆಯಲ್ಲಿ ಮೊದಲ ಬಾರಿಗೆ ಹೌಸ್ ಆಫ್ ಕಾಮನ್ ಗೆ ಆಯ್ಕೆಯಾದ ಅನಿತಾ ಇಂದಿರಾ ಆನಂದ್ ಅವರನ್ನು ಸಾರ್ವಜನಿಕ ಸೇವೆ ಮತ್ತು ಖರೀದಿ ಸಚಿವರಾಗಿ ನೇಮಿಸಲಾಗಿದೆ. ಒಂಟಾರಿಯೊದ ಓಕ್ವಿಲ್ಲೆ ಕ್ಷೇತ್ರದಿಂದ ಅನಿತಾ ಆಯ್ಕೆಯಾಗಿದ್ದಾರೆ. 

ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕಿಯಾಗಿರುವ ಅನಿತಾ  ನೋವಾ ಸ್ಕಾಟಿಯಾ ಪ್ರಾಂತ್ಯದ ಕೆಂಟ್ವಿಲ್ಲೆ ಪಟ್ಟಣದಲ್ಲಿ ಜನಿಸಿದ್ದರು. ಈಕೆಯ ಪೋಷಕರು ಭಾರತೀಯ ಮೂಲದವರಾಗಿದ್ದು ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದರು. ಆಕೆಯ ತಾಯಿ ದಿ.  ಸರೋಜ್ ರಾಮ್ ಪಂಜಾನ್=ಬಿನ ಅಮೃತಸರ್ ಪ್ರದೇಶದವರಾಗಿದ್ದರೆ ತಂದೆ ತಮಿಳುನಾಡಿನ ಮೂಲದವರು. ನಾಲ್ಕು ಮಕ್ಕಳ ತಾಯಿಯಾದ ಅನಿತಾ ಇಂದಿರಾ ಆನಂದ್  ಓಕ್ವಿಲ್ಲೆ ಪ್ರದೇಶದ ಇಂಡೋ-ಕೆನಡಿಯನ್ ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಮತ್ತು ಕೆನಡಿಯನ್ ಮ್ಯೂಸಿಯಂ ಆಫ್ ಹಿಂದೂ ಸಿವಿಲಿಜೇಷನ್ಸ್ ನ ಮಾಜಿ ಅಧ್ಯಕ್ಷರಾಗಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಶರಣಾಗತಿಗೆ ಟ್ರಂಪ್ ಒತ್ತಾಯ: ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಬಗ್ಗೆ ಹೇಳಿದ್ದೇನು?

ಜಮ್ಮು-ಕಾಶ್ಮೀರ: ಉರಿ ಸೆಕ್ಟರ್ ನಲ್ಲಿ ಒಳನುಸುಳುವಿಕೆ ಯತ್ನ, ಪಾಕ್ ಉಗ್ರನ ಹತ್ಯೆ!

ಇರಾನ್ ವಾರ್ ಗೆ ಹೌತಿಗಳು ಸಜ್ಜು! ಮತ್ತೊಂದು ಜಲಸಂಧಿ ಬಂದ್? ಜಾಗತಿಕ ವ್ಯಾಪಾರಕ್ಕೆ ಮತ್ತಷ್ಟು ಹೊಡೆತ!

ಚಿತ್ರದುರ್ಗ: ಭೀಕರ ಅಪಘಾತದಲ್ಲಿ ಮೂವರು ಸಬ್ ಇನ್‌ಸ್ಪೆಕ್ಟರ್‌ ಸಾವು; ಇಬ್ಬರಿಗೆ ಗಂಭೀರ ಗಾಯ

ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಅನುದಾನ: ಅಭಿವೃದ್ಧಿಗೆ ಹಣವಿಲ್ಲವೆಂಬ BJP ಆರೋಪ ಸತ್ಯಕ್ಕೆ ದೂರ; ಸಿಎಂ ಸಿದ್ದರಾಮಯ್ಯ

SCROLL FOR NEXT