ಎಸ್.ಜೈಶಂಕರ್ 
ವಿದೇಶ

ಮೋದಿ ಸರ್ಕಾರ ಈಶಾನ್ಯ ಭಾರತದಲ್ಲಿ ಅಭಿವೃದ್ಧಿ ಕೆಲಸ ಮಾಡಿದೆ: ಜೈಶಂಕರ್

ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದ ಸನ್ನಿವೇಶಗಳ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು, ಈಶಾನ್ಯ ಭಾರತ ಇಂದು "ಬಹುಮಟ್ಟಿಗೆ....

ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದ ಸನ್ನಿವೇಶಗಳ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು, ಈಶಾನ್ಯ ಭಾರತ ಇಂದು "ಬಹುಮಟ್ಟಿಗೆ ಶಾಂತಿಯುತವಾಗಿದೆ". ಅದಕ್ಕೆ ಕಾರಣ ಅಭಿವೃದ್ಧಿ. ಹಾಗೆಯೇ ಕಾಶ್ಮೀರ ಕೂಡ ಮುಂದೊಂದು ದಿನ ಶಾಂತಿಯುತವಾಗಲಿದೆ ಎಂದು ಬುಧವಾರ ಹೇಳಿದ್ದಾರೆ.

"ಈಶಾನ್ಯ ಪ್ರದೇಶದಲ್ಲೂ, ಭಾರತವು ತುಂಬಾ ಕಷ್ಟಕರವಾದ ಪರಿಸ್ಥಿತಿಯನ್ನು ನಿಭಾಯಿಸಿದೆ. ಇಂದು ನೀವು ಈಶಾನ್ಯವನ್ನು ನೋಡಿದರೆ ಅದು ಬಹುಮಟ್ಟಿಗೆ ಶಾಂತಿಯುತವಾಗಿದೆ" ಎಂದು ಡಾ. ಜೈಶಂಕರ್ ಅವರು ಅಮೆರಿಕದ ಹೆಸರಾಂತ ಕೇಂದ್ರದ ಸ್ಟ್ರಾಟೆಜಿಕ್ ಮತ್ತು ಇಂಟರ್ನ್ಯಾಷನಲ್ ಸ್ಟಡೀಸ್ ಭಾಷಣದ ನಂತರ ಪ್ರಶ್ನೆಗಳಿಗೆ ಉತ್ತರಿಸಿದರು.

ಈಶಾನ್ಯ ಪ್ರದೇಶದ ಜನರು 'ಲಾಭದಾಯಕ ಜೀವನೋಪಾಯ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು "ಭದ್ರತಾ ಪಡೆಗಳ ಮೇಲೆ ಕಲ್ಲು ಎಸೆಯುವುದಿಲ್ಲ" ಎಂದು ಅವರು ಹೇಳಿದರು.

"ಅಭಿವೃದ್ಧಿ ವಾಸ್ತವವಾಗಿ ಈಶಾನ್ಯದಲ್ಲಿ ಕೆಲಸ ಮಾಡಿದೆ. ರಾಷ್ಟ್ರೀಯ ಪಕ್ಷಗಳು ಇಂದು ಸಾಕಷ್ಟು ಬೆಂಬಲವನ್ನು ಹೊಂದಿರುವುದರಿಂದ ರಾಜಕೀಯ ಮುಖ್ಯವಾಹಿನಿಯಲ್ಲೂ ಇದು ಬಹಳ ಬಲವಾಗಿ ಕೆಲಸ ಮಾಡಿದೆ" ಎಂದರು.

"ನಾವು (ಭಾರತ ಸರ್ಕಾರ) ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ಮಾಡಲು ಯತ್ನಿಸುತ್ತಿದ್ದೇವೆ. ಇದು ಸಾಧ್ಯವಾದರೆ ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನಿಗಳು ಯೋಜಿಸಿರುವ ಎಲ್ಲ ತಂತ್ರಗಳು ವ್ಯರ್ಥವಾಗಲಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಜೈಶಂಕರ್‌ ತಿಳಿಸಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸ್ಪಷ್ಟ ಉದ್ದೇಶದೊಂದಿಗೆ ಆರಂಭಗೊಂಡ Operation Sindoor ಗುರಿ ತಲುಪಿದ ಮೇಲೆ ಬೇಗನೆ ನಿಲ್ಲಿಸಲಾಯಿತು: IAF ಮುಖ್ಯಸ್ಥ

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ಲಡಾಖ್: ಪತಿಯ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ವಾಂಗ್ಚುಕ್ ಪತ್ನಿ ಗೀತಾಂಜಲಿ

World Weightlifting Championships: ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು

ಆಡಳಿತ ವೈಫಲ್ಯದ ಲಾಭ ಪಡೆಯಲೂ ವಿಫಲವಾಗಿರುವ ಪ್ರತಿಪಕ್ಷ ಬಿಜೆಪಿ (ನೇರ ನೋಟ)

SCROLL FOR NEXT