ಸಾಂದರ್ಭಿಕ ಚಿತ್ರ 
ವಿದೇಶ

ಭಾರತ - ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆದರೆ 125 ಮಿಲಿಯನ್ ಮಂದಿ ಸಾವು: ಅಧ್ಯಯನ

ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆದರೆ ತಕ್ಷಣವೇ 125 ಮಿಲಿಯನ್ ಜನ ಸಾವನ್ನಪ್ಪಲಿದ್ದಾರೆ ಮತ್ತು ಇಡೀ ಜಗತ್ತಿಗೇ ಈ ಯುದ್ಧದ ಬಿಸಿ ಮುಟ್ಟಲಿದೆ.

ವಾಷಿಂಗ್ಟನ್: ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆದರೆ ತಕ್ಷಣವೇ 125 ಮಿಲಿಯನ್ ಜನ ಸಾವನ್ನಪ್ಪಲಿದ್ದಾರೆ ಮತ್ತು ಇಡೀ ಜಗತ್ತಿಗೇ ಈ ಯುದ್ಧದ ಬಿಸಿ ಮುಟ್ಟಲಿದೆ. ಜಾಗತಿಕ ಹವಾಮಾನ ದುರಂತಕ್ಕೂ ಇದು ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಪರಮಾಣು ಯುದ್ಧ ಕೇವಲ ಎರಡು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿ ಆ ದೇಶಗಳಲ್ಲಿ ಮಾತ್ರ ಹಾನಿ ಸಂಭವಿಸುವುದಿಲ್ಲ. ಅದು ಇಡೀ ಜಗತ್ತಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯದ ಸಹ-ಲೇಖಕ ಅಲನ್ ರೋಬಾಕ್ ಅವರು ಹೇಳಿದ್ದಾರೆ.

ಜರ್ನಲ್ ಸೈನ್ಸ್ ಅಡ್ವಾನ್ಸಸ್ ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಭವಿಸಬಹುದಾದ ಯುದ್ಧದ ಸನ್ನಿವೇಶವನ್ನು ವಿವರಿಸಿದೆ.

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ - ಪಾಕಿಸ್ತಾನ ನಡುವೆ ಹಲವು ಬಾರಿ ಯುದ್ಧಗಳಾಗಿವೆ. ಆದರೆ ಪರಮಾಣು ಯುದ್ಧವಾಗಿಲ್ಲ. ಈಗ ಉಭಯ ದೇಶಗಳ ನಡುವೆ ಮತ್ತೊಂದು ಯುದ್ಧ ನಡೆಯುವ ಸಾಧ್ಯತೆಗಳು ಕಾಣಿಸುತ್ತಿದ್ದು, ಎರಡೂ ರಾಷ್ಟ್ರಗಳು 2025ರ ವೇಳೆಗೆ 400 ರಿಂದ 500 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲಿವೆ ಎಂದು ಅಧ್ಯಯನ ತಿಳಿಸಿದೆ.

ಜಗತ್ತಿನಲ್ಲಿ ಒಟ್ಟು 9 ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಆದರೆ ಭಾರತ -ಪಾಕಿಸ್ತಾನ ಮಾತ್ರ ಅತೀ ವೇಗವಾಗಿ ತಮ್ಮ ತಮ್ಮ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂದು ರೋಬಾಕ್ ಅವರು ಹೇಳಿದ್ದಾರೆ.

ಎರಡು ಪರಮಾಣು ರಾಷ್ಟ್ರಗಳ ನಡುವೆ ದಿನದಿಂದ ದಿನಕ್ಕೆ ವಿಶೇಷವಾಗಿ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಅಶಾಂತಿ ಹೆಚ್ಚುತ್ತಿದ್ದು, ಇದು ಮುಂದೊಂದು ದಿನ ಪರಮಾಣು ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಭಾರತ - ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆದರೆ ಸುಮಾರು 50 ರಿಂದ 125 ಮಿಲಿಯನ್ ಜನ ತಕ್ಷಣವೇ ಸಾವನ್ನಪ್ಪಲ್ಲಿದ್ದಾರೆ ಮತ್ತು ನಂತರ ಪರಮಾಣು ಬಾಂಬ್ ನ ಪರಿಣಾಮದಿಂದ ಜಗತ್ತಿನಾದ್ಯಂತ ಹಲವು ಸಾವು ನೋವುಗಳು ಸಂಭವಿಸಲಿವೆ ಎಂದು ಸಂಶೋಧಕರು ವಿವರಿಸಿದ್ದಾರೆ.

ಕಾಶ್ಮೀರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಪಾಕಿಸ್ತಾನದ ದುರಾಸೆಯಿಂದಾಗಿ ಈವರೆಗೆ ನಾಲ್ಕು ಯುದ್ಧಗಳು ಉಭಯ ರಾಷ್ಟ್ರಗಳ ನಡುವೆ ನಡೆದಿವೆ. ಈ ಪೈಕಿ ಮೂರು ಯುದ್ಧಗಳು ನೇರವಾಗಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ್ದರೆ, ಒಂದು ಯುದ್ಧವು ಪೂರ್ವ ಪಾಕಿಸ್ತಾನ ವಿಮೋಚನೆಗೆ ಸಂಬಂಧಿಸಿದ್ದು. ವಿಶೇಷ ಎಂದರೆ, ಈ ನಾಲ್ಕೂ ಯುದ್ಧಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆದರೂ ಪಾಕ್‌ ಪಾಠ ಕಲಿತಿಲ್ಲ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT