ವಿದೇಶ

ಭಯೋತ್ಪಾದನೆ ವಿರುದ್ಧದ ಹೋರಾಟ: ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಬಂಡವಾಳ ಬಯಲು!   

Srinivas Rao BV

ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಮುಜುಗರಕ್ಕೊಳಗಾಗುತ್ತಿರುವ ಪಾಕಿಸ್ತಾನದ ಬಂಡವಾಳ ಮತ್ತೊಮ್ಮೆ ಜಾಗತಿಕವಾಗಿ ಬಯಲಾಗಿದೆ. 

ಈಬಾರಿ ಭಯೋತ್ಪಾದನೆ ವಿರುದ್ಧದ ಹೋರಾಟದ ವಿಷಯದಲ್ಲಿ ಪಾಕಿಸ್ತಾನದ ಮುಖವಾಡ ಬಯಲಾಗಿದ್ದು,  ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌)ಯ ಹಣ ವರ್ಗಾವಣೆಗೆ ಸಂಬಂಧಪಟ್ಟ ಪ್ರಾದೇಶಿಕ ಅಂಗ ಸಂಸ್ಥೆಯಾಗಿರುವ ಏಷ್ಯಾ ಪೆಸಿಫಿಕ್ ಗ್ರೂಪ್ (ಎಪಿಜಿ) ಹಣಕಾಸು ಸಂಸ್ಥೆ ಪಾಕಿಸ್ತಾನದ ಬಣ್ಣ ಬಯಲು ಮಾಡಿದೆ. 

ಎಪಿಜಿ ನೀಡಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನ ಭಯೋತ್ಪಾದಕರಿಗೆ ಆರ್ಥಿಕ ನೆರವು ದೊರೆಯದಂತೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. 

ಲಷ್ಕರ್-ಎ-ತೈಯ್ಬಾ (ಎಲ್ಇಟಿ) ಜಮಾತ್-ಉದ್-ದವಾ(ಜೆಯುಡಿ), ಫಲಾಹ್-ಐ-ಇನ್ಸಾನಿಯತ್ ಫೌಂಡೇಷನ್ (ಎಫ್ಐಎಫ್) ಹಾಗೂ ಉಗ್ರ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪಾಕ್ ವಿಫಲವಾಗಿದೆ ಎಂದು ಎಪಿಜಿ ಹೇಳಿದೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಇದೊಂದು ದೊಡ್ಡ ಹಿನ್ನಡೆಯಾಗಿದ್ದು, ಇದರ ಪರಿಣಾಮ ಎಫ್ಎಟಿಎಫ್ ನಿಂದ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

SCROLL FOR NEXT