ವಿದೇಶ

ಭಾರತ-ಅಮೆರಿಕಾ ಮಧ್ಯೆ ವ್ಯಾಪಾರ ಭಿನ್ನತೆ ಕಡಿಮೆಯಾಗುತ್ತಿದೆ, ಸದ್ಯದಲ್ಲೇ ಒಪ್ಪಂದ ನಿರೀಕ್ಷೆ: ನಿರ್ಮಲಾ ಸೀತಾರಾಮನ್ 

Sumana Upadhyaya

ವಾಷಿಂಗ್ಟನ್: ಭಾರತ ಮತ್ತು ಅಮೆರಿಕಾ ನಡುವೆ ವ್ಯಾಪಾರದಲ್ಲಿನ ವ್ಯತ್ಯಾಸಗಳು ಕಡಿಮೆಯಾಗಿದ್ದು ಇದರಿಂದ ಎರಡೂ ದೇಶಗಳು ಸದ್ಯದಲ್ಲಿಯೇ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಭಾರತ-ಅಮೆರಿಕಾ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ. ವ್ಯಾಪಾರದಲ್ಲಿ ಸಣ್ಣಪುಟ್ಟ ಭಿನ್ನತೆ ಎರಡು ದೇಶಗಳ ಮಧ್ಯೆ ಇವೆ, ಹಣಕಾಸು ಸಚಿವಾಲಯ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಸದ್ಯದಲ್ಲಿಯೇ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ ಎಂದು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ಸ್ಥಿತಿಗತಿ ಬಗ್ಗೆ ಹೇಳಿದರು.ಅವರು ವಾಷಿಂಗ್ಟನ್ ನಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕಿನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. 


ಈ ಮಧ್ಯೆ, ನಿನ್ನೆ ಅಮೆರಿಕಾದ ವಾಣಿಜ್ಯ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ವಾಣಿಜ್ಯ ಇಲಾಖೆ ಕಾರ್ಯದರ್ಶಿ ವಿಲ್ಬುರ್ ರೊಸ್ಸ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಮೆರಿಕಾ-ಭಾರತ ನಡುವಿನ ವ್ಯಾಪಾರ ಸಂಬಂಧ ಉತ್ತಮವಾಗಿದೆ ಎಂದು ಹೇಳಿದ್ದರು ಎಂದಿದೆ.


ವಿಲ್ಬುರ್ ರೊಸ್ಸ್ ಭಾರತಕ್ಕೆ ಬಂದಿದ್ದ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತುಕತೆ, ಸಭೆ ನಡೆಸಿ ಅಮೆರಿಕಾದ ವಾಣಿಜ್ಯ ಹಿತಾಸಕ್ತಿಗಳ ಬಗ್ಗೆ ತಿಳಿಸಿದ್ದರು.

SCROLL FOR NEXT