125 ರಿಂದ 250 ಗ್ರಾಮ್ ಚಿಕ್ಕದಾದ ಆಟಂಬಾಂಬ್ ಹೊಂದಿದ್ದೇವೆ- ಪಾಕ್ ಸಚಿವ ಶೇಕ್ ರಶೀದ್
ಸದಾ ವಿವಾದಾತ್ಮಾಕ ಹೇಳಿಕೆಯಿಂದಾಗಿ ಹೆಸರಾಗಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಮತ್ತೆ ತನ್ನ ನಾಲಿಗೆಯನ್ನು ಹರಿಯಬಿಟ್ಟಿದ್ದಾನೆ
ಇಸ್ಲಾಮಾಬಾದ್ : ಸದಾ ವಿವಾದಾತ್ಮಾಕ ಹೇಳಿಕೆಯಿಂದಾಗಿ ಹೆಸರಾಗಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಮತ್ತೆ ತನ್ನ ನಾಲಿಗೆಯನ್ನು ಹರಿಯಬಿಟ್ಟಿದ್ದಾನೆ. ತಮ್ಮ ಬಳಿ 125ರಿಂದ 250 ಗ್ರಾಮ್ ಅಟಂಬಾಂಬ್ ಗಳಿದ್ದು, ಅವುಗಳನ್ನು ಭಾರತದಲ್ಲಿ ಗುರಿ ಇಟ್ಟಿರುವ ಪ್ರದೇಶಗಳ ಹಾಕುವ ಸಾಧ್ಯತೆ ಇದೆ ಎಂದು ಹೇಳಿದ್ದಾನೆ.
ಪಾಕಿಸ್ತಾನ ತಂತ್ರಜ್ಞಾನದಲ್ಲಿ ಅಭಿವೃದ್ದಿ ಹೊಂದಿದ್ದೆ ಎಂಬುದನ್ನು ತೋರ್ಪಡಿಸಿಕೊಳ್ಳುವ ಸಲುವಾಗಿ ಶೇಕ್ ರಶೀದ್ ಅಹ್ಮದ್ ಈ ರೀತಿಯ ಹೇಳಿಕೆ ನೀಡಿದ್ದಾನೆ ಎಂದು ಆ ರಾಷ್ಟ್ರದ ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ.
ಶೇಕ್ ರಶೀದ್ ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲಾ, ಈ ಹಿಂದೆ ಅನೇಕ ಬಾರಿ ವಿವಾದಾತ್ಮಾಕ ಹೇಳಿಕೆ ನೀಡಿದ್ದಾನೆ. ಇತ್ತೀಚಿಗೆ ನರೇಂದ್ರ ಮೋದಿ ವಿರುದ್ಧ ಮಾತನಾಡುವಾಗ ವಿದ್ಯುತ್ ಶಾಕ್ ತಗುಲಿ ಸುದ್ದಿಯಾಗಿದ್ದ.
ಭಾರತ ಹಾಗೂ ಪಾಕಿಸ್ತಾನ ನಡುವಣ ಮುಂದಿನ ತಿಂಗಳು ಅಥವಾ ಅಕ್ಟೋಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯುದ್ದ ನಡೆಯಲಿದೆ ಎಂದು ಸಹ ಹೇಳಿಕೆ ನೀಡಿದ್ದ. ಈ ತಿಂಗಳಲ್ಲಿ ಹಬ್ಬಗಳು ನಡೆಯಲಿದ್ದು, ಡಿಸೆಂಬರ್ ಗೆ ಬದಲಾಯಿಸಲಾಗುತ್ತದೆಯೇ ಎಂದು ಭಾರತದ ನೆಟ್ಟಿಗರು ರಶೀದ್ ಗೆ ಟ್ವೀಟರ್ ನಲ್ಲಿ ಮಂಗಳಾರತಿ ಮಾಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.