ಅಬ್ದುಲ್ ಬಸಿತ್ ವಿವಾದಾತ್ಮಕ ಟ್ವೀಟ್ 
ವಿದೇಶ

ಜಾಗತಿಕ ಮಟ್ಟದಲ್ಲಿ ಪಾಕ್ ಮಾನ ಹರಾಜು: ಪಾಕ್ ಮಾಜಿ ರಾಯಭಾರಿಯ ಕಾಲೆಳೆದ ಪೋರ್ನ್ ಸ್ಟಾರ್!

ನೀಲಿ ಚಿತ್ರದ ಫೋಟೋ ತೋರಿಸಿ ಕಾಶ್ಮೀರಿ ಯುವಕನದ್ದು ಎಂದು ಹೇಳಿದ್ದ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಅವರ ಪ್ರಮಾದದ ಟ್ವೀಟ್ ಇದೀಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಲಾಗಿದೆ.

ವಾಷಿಂಗ್ಟನ್: ನೀಲಿ ಚಿತ್ರದ ಫೋಟೋ ತೋರಿಸಿ ಕಾಶ್ಮೀರಿ ಯುವಕನದ್ದು ಎಂದು ಹೇಳಿದ್ದ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಅವರ ಪ್ರಮಾದದ ಟ್ವೀಟ್ ಇದೀಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಲಾಗಿದೆ.

ಹೌದು.. ಇತ್ತೀಚೆಗೆ ಅಶ್ಲೀಲ ಚಿತ್ರದ ಚಿತ್ರವೊಂದನ್ನು ತಪ್ಪಾಗಿ ಗ್ರಹಿಸಿ ಅದು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಗುಂಡಿನ ದಾಳಿಯಲ್ಲಿ ಗಾಯಗೊಂಡ ಕಾಶ್ಮೀರ ಯುವಕನದ್ದು ಎಂದು ಹೇಳಿ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಗೆ ಆ ಚಿತ್ರದಲ್ಲಿ ನಟಿಸಿದ್ದ ನೀಲಿ ಚಿತ್ರತಾರೆಯೇ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 

ಅಬ್ದುಲ್ ಬಸಿತ್ ಅವರ ಟ್ವೀಟ್ ನಲ್ಲಿರುವ ನೀಲಿ ಚಿತ್ರದ ಹಕ್ಕು ಸ್ವಾಮ್ಯ ಹೊಂದಿರುವ ಬ್ರೇಸರ್ಸ್ (Brazzers) ಸಂಸ್ಥೆ ಈ ಕುರಿತಂತೆ ತನ್ನ ಟ್ವಿಟರ್ ನಲ್ಲಿ ದಯವಿಟ್ಟು ಜಾನಿ ಸಿನ್ಸ್ ಗಾಗಿ ಪ್ರಾರ್ಥನೆ ಮಾಡಿ ಎಂದು ವ್ಯಂಗ್ಯಾತ್ಮಕ ಟ್ವೀಟ್ ಮಾಡಿತ್ತು. ಇದೇ ಟ್ವೀಟ್ ಅನ್ನು ಉಲ್ಲೇಖಿಸಿ ಆ ಚಿತ್ರದಲ್ಲಿ ನಟಿಸಿದ್ದ ನೀಲಿ ಚಿತ್ರತಾರೆ ಜಾನಿ ಸಿನ್ಸ್ ಕೂಡ ಟ್ವೀಟ್ ಮಾಡಿದ್ದು, ಅಬ್ದುಲ್ ಬಸಿತ್ ಅವರ ಟ್ವೀಟ್ ಖಾತೆಗೆ ಹೊಸ ಹೊಸ ಫಾಲೋವರ್ಸ್ ಬಂದಿದ್ದಾರೆ. ಆದರೆ ನನ್ನ ಕಣ್ಣುಗಳಿಗೆ ಏನೂ ಆಗಿಲ್ಲ. ಅವು ಆರೋಗ್ಯವಾಗಿವೆ ಎಂದು ಅಬ್ದುಲ್ ಬಸಿತ್ ಅವರ ಕಾಲೆಳೆದಿದ್ದಾರೆ.

ಬ್ರೇಸರ್ಸ್ ಮತ್ತು ಜಾನಿ ಸಿನ್ಸ್ ಟ್ವೀಟ್ ಗಳಿಗೆ ಪಾಕಿಸ್ತಾನಿ ಖಾತೆದಾರರೇ ಪ್ರತಿಕ್ರಿಯೆ ನೀಡಿದ್ದು, ಇದು ಪಾಕಿಸ್ತಾನಕ್ಕೆ ಆದ ಜಾಗತಿಕ ಅಪಮಾನ ಎಂದು ಹೇಳಿ ಅಬ್ದುಲ್ ಬಸಿತ್ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಅಮರ್ ಎಂಬ ಖಾತೆದಾರರೊಬ್ಬರು ಜಾನಿ ಸಿನ್ಸ್ ಅವರ ಅಶ್ಲೀಲ ಚಿತ್ರವೊಂದರ ಫೋಟೋವನ್ನು ಅಪ್ಲೋಡ್ ಮಾಡಿ ಇದು ಭಾರತೀಯ ಸೇನಾ ಪಡೆಗಳಿಂದ ಪೆಟ್ಟು ತಿಂದ ಕಾಶ್ಮೀರಿ ಯುವಕ ಅನಂತ್ ನಾಗ್ ಜಿಲ್ಲೆಯ ಯೂಸೂಫ್ ನ ಚಿತ್ರವಿದು. ಸೈನಿಕರು ಸಿಡಿಸಿದ ಪೆಲೆಟ್ ಗಳ ದಾಳಿಯಿಂದಾಗಿ ಈತನ ಕಣ್ಣುಗಳು ಹಾಳಾಗಿವೆ. ಈತನಿಗಾಗಿ ಆತನ ಕುಟುಂಬಸ್ಥರು ರೋದಿಸುತ್ತಿದ್ದಾರೆ. ಕಾಶ್ಮೀರಿಗಳ ಹಕ್ಕಿಗಾಗಿ ಧನಿ ಎತ್ತೋಣ ಎಂದು ಟ್ವೀಟ್ ಮಾಡಿದ್ದ. ಇದೇ ಟ್ವೀಟ್ ಅನ್ನು ಅಬ್ದುಲ್ ಬಸಿತ್ ಪೂರ್ವಾಪರ ಆಲೋಚಿಸದೇ ರಿಟ್ವೀಟ್ ಮಾಡಿದ್ದರು.

ಅಬ್ದುಲ್ ಬಸಿತ್ ರಿಟ್ವೀಟ್ ಮಾಡುತ್ತಿದ್ದಂತೆಯೇ ಈ ಟ್ವೀಟ್ ಅನ್ನು ಕಂಡು ಹಿಡಿದ ಟ್ವೀಟಿಗರು ಅಬ್ದುಲ್ ಬಸಿತ್ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಇದೀಗ ಬ್ರೇಸರ್ಸ್ ಮತ್ತು ಜಾನಿ ಸಿನ್ಸ್ ಅವರ ಟ್ವೀಟ್ ನಿಂದಾಗಿ ಪಾಕಿಸ್ತಾನದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ