ವಿದೇಶ

ಇಸ್ರೋ 'ಚಂದ್ರಯಾನ-2'ಗೆ ಪಾಕಿಸ್ತಾನ ಮೊದಲ ಮಹಿಳಾ ಗಗನಯಾತ್ರಿ ಅಭಿನಂದನೆ

Raghavendra Adiga

ಕರಾಚಿ: ಪಾಕಿಸ್ತಾನದ ಮೊದಲ ಮಹಿಳಾ ಗಗನಯಾತ್ರಿ  ನಮೀರಾ ಸಲೀಂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ2 ಮಿಷನ್ ಮತ್ತು ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಐತಿಹಾಸಿಕ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. 

"ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸುವ ಕುರಿತು  ಭಾರತ ಮತ್ತು ಇಸ್ರೋ ಮಾಡಿದ ಐತಿಹಾಸಿಕ ಪ್ರಯತ್ನವನ್ನು ನಾನು ಅಭಿನಂದಿಸುತ್ತೇನೆ" ಎಂದು ಕರಾಚಿ ಮೂಲದ ಡಿಜಿಟಲ್ ಸೈನ್ಸ್ ನಿಯತಕಾಲಿಕೆ ಸೈಂಟಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ಃಏಳಿದ್ದಾರೆ.

"ಚಂದ್ರಯಾನ2 ಚಂದ್ರನ ಮಿಷನ್ ನಿಜಕ್ಕೂ ದಕ್ಷಿಣ ಏಷ್ಯಾಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದೆ.ಇದು ಈ ಪ್ರದೇಶ ಮಾತ್ರವಲ್ಲ ಇಡೀ ಜಾಗತಿಕ ಬಾಹ್ಯಾಕಾಶ ಉದ್ಯಮವನ್ನು ಹೆಮ್ಮೆಪಡುವಂತೆ ಮಾಡುತ್ತದೆ.ದಕ್ಷಿಣ ಏಷ್ಯಾದಲ್ಲಿ ಬಾಹ್ಯಾಕಾಶ ವಲಯದಲ್ಲಿನ ಪ್ರಾದೇಶಿಕ ಬೆಳವಣಿಗೆಗಳು ಗಮನಾರ್ಹವಾಗಿವೆ ಮತ್ತು ಯಾವ ರಾಷ್ಟ್ರವು ಮುನ್ನಡೆದರೂ ಬಾಹ್ಯಾಕಾಶದಲ್ಲಿ, ಎಲ್ಲಾ ರಾಜಕೀಯ ಗಡಿಗಳು ಮಾಯವಾಗುತ್ತದೆ.ಮತ್ತು ಬಾಹ್ಯಾಕಾಶದಲ್ಲಿ ನಮ್ಮನ್ನು ಅದು ಒಂದಾಗಿಸುತ್ತದೆ." ಅವರು ಹೇಳಿದ್ದಾರೆ.

ವರ್ಜಿನ್ ಗ್ಯಾಲಕ್ಸಿಯ ಹಡಗಿನಲ್ಲಿ ಬಾಹ್ಯಾಕಾಶಕ್ಕೆ ಹೋದ ಮೊದಲ ಪಾಕಿಸ್ತಾನಿ ಮಹಿಳೆಯಾಗಿ ಸಲೀಂ ಗುರುತಿಸಿಕೊಂಡಿದ್ದಾರೆ.

SCROLL FOR NEXT