ವಿದೇಶ

ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ: 30 ಉಗ್ರರ ಹತ್ಯೆ

Srinivas Rao BV

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಉತ್ತರ ತಖಾರ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ನಡೆದ ವೈಮಾನಿಕ ದಾಳಿಯಲ್ಲಿ ಸುಮಾರು 30 ತಾಲಿಬಾನ್ ಉಗ್ರರು ಮೃತಪಟ್ಟಿದ್ದಾರೆ ಎಂದು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. 

ಖಚಿತ ಬೇಹುಗಾರಿಕೆ  ಮಾಹಿತಿಯ ಮೇರೆಗೆ  "ಖ್ವಾಜಾ ಬಹಾವುದ್ದೀನ್ ಜಿಲ್ಲೆಯ ಹೊರವಲಯದಲ್ಲಿ ದಾಳಿ ನಡೆಸಲಾಗಿದೆ ಇದರಿಂದ ಸುಮಾರು 30 ಉಗ್ರರು ಗಾಯಗೊಂಡಿದ್ದಾರೆ ಎಂದು ಅಫಘಾನ್ ಸೇನಾ ವಕ್ತಾರ  ಅಬ್ದುಲ್ ಖಲೀಲ್ ಖಲೀಲಿ ಕ್ಸಿನ್ಹುವಾಗೆ ತಿಳಿಸಿದ್ದಾರೆ. ಬಂದೂಕುಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್‌ಗಳೊಂದಿಗೆ  ಶಸ್ತ್ರಸಜ್ಜಿತವಾದ ಉದ್ದೇಶಿತ ಉಗ್ರರು ಜಿಲ್ಲಾ ಕೇಂದ್ರದ ಮೇಲೆ ಭಾರಿ ದಾಳಿ ನಡೆಸಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.
 

SCROLL FOR NEXT