ಮೋದಿ-ರಬಿ 
ವಿದೇಶ

ಪ್ರಧಾನಿ ಮೋದಿಗೆ ಹೆಬ್ಬಾವು ಬಿಡುವ ಬೆದರಿಕೆಯೊಡ್ಡಿದ್ದ ಪಾಕ್ ಗಾಯಕಿಗೆ ಪೊಲೀಸರಿಂದ ಆಪರೇಷನ್ ಖೆಡ್ಡ!

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಬ್ಬಾವು, ಮೊಸಳೆ ಬಿಡುವ ಬೆದರಿಕೆಯೊಡ್ಡಿದ್ದ ಪಾಕ್ ಗಾಯಕಿಗೆ ಪಾಕ್ ಪೊಲೀಸರು ಖೆಡ್ಡ ತೋಡಿದ್ದಾರೆ.

ಇಸ್ಲಾಮಾಬಾದ್: ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಬ್ಬಾವು, ಮೊಸಳೆ ಬಿಡುವ ಬೆದರಿಕೆಯೊಡ್ಡಿದ್ದ ಪಾಕ್ ಗಾಯಕಿಗೆ ಪಾಕ್ ಪೊಲೀಸರು ಖೆಡ್ಡ ತೋಡಿದ್ದಾರೆ.

ಹೆಬ್ಬಾವು, ಮೊಸಳೆ ಮತ್ತು ನಾಗರಹಾವುಗಳನ್ನು ಇಟ್ಟುಕೊಂಡು ಮೋದಿಯನ್ನು ನರಕಕ್ಕೆ ಕಳುಹಿಸುವ ಬೆದರಿಕೆಯನ್ನು ಪಾಕ್ ಗಾಯಕಿ ರಬಿ  ಪೀರ್ ಹಾಕಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಷ ಜಂತುಗಳನ್ನು ಅಕ್ರಮವಾಗಿ ಸಾಕು ಪ್ರಾಣಿಗಳನ್ನಾಗಿ ಇರಿಸಿಕೊಂಡಿದ್ದ ಅರೋಪದಡಿ ಪಾಕಿಸ್ತಾನದ ಪೊಲೀಸರು ರಬಿ ಪೀರ್ ಜಾದಾರನ್ನು ಬಂಧಿಸಿದ್ದಾರೆ. 

ರಬಿ ಟ್ವೀಟರ್ ನಲ್ಲಿ ನಾನು ಒಬ್ಬ ಕಾಶ್ಮೀರಿ ಯುವತಿ, ಭಾರತವನ್ನು ಹಣಿಯಲು ಹಾವುಗಳೊಂದಿಗೆ ಸಜ್ಜಾಗಿದ್ದೇನೆ. ಈ ಉಡುಗೊರೆಯನ್ನು ವಿಶೇಷವಾಗಿ ನರೇಂದ್ರ ಮೋದಿಗಾಗಿ ಮೀಸಲು..ಇವುಗಳ ಮೂಲಕ ನಿಮಗೆ ನರಕ ದರ್ಶನವಾಗುತ್ತದೆ. ನನ್ನ ಈ ಸ್ನೇಹಿತರು ನಿನ್ನನ್ನು ಆ ನರಕದಲ್ಲಿ ತಿಂದು ತೇಗಲಿವೆ ಎಂದು ಹೇಳಿದ್ದರು. 

ಈ ವಿಡಿಯೋವನ್ನು ಗಮನಿಸಿದ ಪಾಕಿಸ್ತಾನದ ಪಂಜಾಬ್ ವನ್ಯಜೀವಿಗಳ ರಕ್ಷಣೆ ಮತ್ತು ಉದ್ಯಾನಗಳ ಇಲಾಖೆಯ ಅಧಿಕಾರಿಗಳು ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!