ಮೃತ ಸಿಖ್ ಪೊಲೀಸ್ ಅಧಿಕಾರಿ 
ವಿದೇಶ

ಅಮೆರಿಕಾದ ಟೆಕ್ಸಾಸ್ ನಲ್ಲಿ ಶೂಟೌಟ್: ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿ ಹತ್ಯೆ 

ಅಮೆರಿಕಾದ ಟೆಕ್ಸಾಸ್ ನ  ಟ್ರಾಫಿಕ್ ವೊಂದರಲ್ಲಿ ವಾಹನ ತಡೆದ ಹಿನ್ನೆಲೆಯಲ್ಲಿ  ವ್ಯಕ್ತಿಯೋರ್ವ ಮನಬಂದಂತೆ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ  ಭಾರತೀಯ ಮೂಲದ ಅಮೆರಿಕಾದ ಸಿಖ್  ಪೊಲೀಸ್  ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಟೆಕ್ಸಾಸ್ : ಅಮೆರಿಕಾದ ಟೆಕ್ಸಾಸ್ ನ  ಟ್ರಾಫಿಕ್ ವೊಂದರಲ್ಲಿ ವಾಹನ ತಡೆದ ಹಿನ್ನೆಲೆಯಲ್ಲಿ  ವ್ಯಕ್ತಿಯೋರ್ವ ಮನಬಂದಂತೆ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ  ಭಾರತೀಯ ಮೂಲದ ಅಮೆರಿಕಾದ ಸಿಖ್  ಪೊಲೀಸ್  ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಹ್ಯಾರಿಸ್ ಕೌಂಟಿ ಶೆರಿಫ್‌ನ ಉಪ ಅಧಿಕಾರಿ ಸಂದೀಪ್ ಸಿಂಗ್ ದಾಲಿವಾಲ್ ಮೃತ ದುರ್ದೈವಿ. ಅವರಿಗೆ ಇನ್ನೂ 40 ವರ್ಷ ವಯಸ್ಸಾಗಿತ್ತು ಎಂದು ಶೆರಿಫ್ ಇಡಿ ಗೊನ್ಜಾಲೆಜ್ ಹೇಳಿದ್ದಾರೆ. 

ಪುರುಷ ಹಾಗೂ ಮಹಿಳೆಯೊಬ್ಬರಿದ್ದ ವಾಹನವನ್ನು ಸಂದೀಪ್ ಸಿಂಗ್ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡು ಕಾರಿನಿಂದ ಇಳಿದು ಬಂದ ವ್ಯಕ್ತಿಯೊಬ್ಬ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು, ನಿರ್ದಯವಾಗಿ ಹತ್ಯೆ ಮಾಡಿದ್ದಾನೆ. ನಂತರ ಹಂತಕ ಹತ್ತಿರವಿದ್ದ ಶಾಫಿಂಗ್ ಸೆಂಟರ್ ನತ್ತ ಓಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ತನಿಖಾಧಿಕಾರಿಗಳು ಹಂತಕನ ಗುರುತು ಪತ್ತೆ ಹಚ್ಚಿದ್ದಾರೆ.  ಗನ್ ಮ್ಯಾನ್ ಹಾಗೂ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ .ದಾಲಿವಾಲ್  ವಿವಾಹವಾಗಿದ್ದು, ಮೂವರು ಮಕ್ಕಳ ತಂದೆಯಾಗಿದ್ದು, ಪರೋಪಕಾರ ಗುಣದಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದರು ಎಂದು ಗೊನ್ಜಾಲೆಜ್ ಹೇಳಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video