ವಿದೇಶ

ಕೊರೋನಾ: '10 ಸಾವಿರ ವೆಂಟಿಲೇಟರ್ ಕೊಟ್ಟರೆ ಪಾಕ್ ಭಾರತದ ಸಹಾಯವನ್ನು ಎಂದಿಗೂ ನೆನಪಿಟ್ಟುಕೊಳ್ಳುತ್ತೆ' 

Srinivas Rao BV

ಇಸ್ಲಾಮಾಬಾದ್: ಕೊರೋನಾ ಎದುರಿಸಲು ಭಾರತದ ನೆರೆ ರಾಷ್ಟ್ರಗಳು ಹಲವಾರು ರೀತಿಯಲ್ಲಿ ಭಾರತದ ಸಹಾಯಕ್ಕಾಗಿ ಕೇಳುತ್ತಿವೆ.

ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಈ ಬಗ್ಗೆ ಮಾತನಾಡಿದ್ದು, ಟಿ.ವಿಗೆ ಮಾತ್ರ ಸೀಮಿತವಾಗಿರುವಂತೆ ಭಾರತ-ಪಾಕಿಸ್ತಾನದ ನಡುವೆ ಏಕದಿನ ಸರಣಿ ನಡೆಸಿ ನಿಧಿ ಸಂಗ್ರಹ ಮಾಡುವಂತೆ ಸಲಹೆ ನೀಡಿದ್ದಾರೆ. 

ಐಸಿಸಿ ಹೊರತಾದ ಕ್ರಿಕೆಟ್ ಸರಣಿಯಲ್ಲಿ ಪಾಕಿಸ್ತಾನ-ಭಾರತ ಮುಖಾಮುಖಿಯಾಗಿ ಹಲವು ವರ್ಷಗಳೇ ಕಳೆದಿದ್ದು, ಈಗ ಸರಣಿ ಏರ್ಪಡಿಸಿದರೆ ಉತ್ತಮ ವೀಕ್ಷಣೆ ಲಭ್ಯವಾಗಲಿದೆ. ಇದರಿಂದಾಗಿ ಕೊರೋನಾ ವೈರಸ್ ಎದುರಿಸುವುದಕ್ಕೆ ಉಭಯ ರಾಷ್ಟ್ರಗಳಿಗೂ ನಿಧಿ ಸಂಗ್ರಹ ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವೂ ಬೆಸೆಯಲಿದೆ ಎಂದು ಹೇಳಿದ್ದಾರೆ.

ಭಾರತ ಪಾಕಿಸ್ತಾನಕ್ಕೆ 10 ಸಾವಿರ ವೆಂಟಿಲೇಟರ್ ಗಳನ್ನು ಪೂರೈಸಿದರೆ ಅದನ್ನು ಪಾಕಿಸ್ತಾನ ಎಂದಿಗೂ ಮರೆಯುವುದಿಲ್ಲ, ಎಂದಿಗೂ ನೆನಪಿಟ್ಟುಕೊಳ್ಳುತ್ತದೆ, ಆದರೆ ನಮಗೆ ಕ್ರಿಕೆಟ್ ಸರಣಿ ಆಯೋಜಿಸಲಷ್ಟೇ ಹೇಳಲು ಸಾಧ್ಯ ಉಳಿದದ್ದು ಅಧಿಕಾರಿಗಳು ನಿರ್ಧರಿಸಬೇಕೆಂದು ಎಂದು ಅಖ್ತರ್ ಹೇಳಿದ್ದಾರೆ.

SCROLL FOR NEXT