ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೋನಾಗೆ ಬಲಿ
ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೊನಾದಿಂದ ಮೃತಪಟ್ಟಿದ್ದಾರೆ. 74 ವರ್ಷ ಈ ನಟಿ ಮಾರಕ ವೈರಸ್ಗೆ ಬಲಿಯಾಗಿದ್ದಾರೆ. 'ವಿಚ್ ಫಿಂಡರ್ ಜನರಲ್' ಹಾರರ್ ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು.
ವಾಷಿಂಗ್ಟನ್, ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೊನಾದಿಂದ ಮೃತಪಟ್ಟಿದ್ದಾರೆ. 74 ವರ್ಷ ಈ ನಟಿ ಮಾರಕ ವೈರಸ್ಗೆ ಬಲಿಯಾಗಿದ್ದಾರೆ. 'ವಿಚ್ ಫಿಂಡರ್ ಜನರಲ್' ಹಾರರ್ ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು.
ನಟಿ ಜೊತೆಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಹಾಲಿವುಡ್ ವರದಿಗಳ ಪ್ರಕಾರ ಕಳೆದ ವಾರ ನಿಧನ ಹೊಂದಿದ್ದಾರೆ. ಪರಿಕ್ಷಾ ವರದಿಗಳ ಪ್ರಕಾರ ಅವರು ಕೊರೋನಾಗೆ ಬಲಿಯಾಗಿರುವುದು ದೃಢಪಟ್ಟಿದೆ ಎಂದು ಆಕೆಯ ಮೊಮ್ಮಗ ತಿಳಿಸಿದ್ದಾರೆ.
'ಮೈಕಲ್ ರೀವ್ಸ್' ಅವರ ಮೊದಲ ಸಿನಿಮಾವಾಗಿತ್ತು. ಆ ನಂತರ 'ದಿ ಒಬ್ಲಾನ್ಗ್ ಬಾಕ್ಸ್, ಕ್ರೈ ಆ ದಿ ಬಾಂಶೀ ಅಸ ಆ ಮಿಸ್ಟ್ರೆಸ್ಸ್', 'ಟು ಜಂಟಲ್ ಮ್ಯಾನ್ ಶೇರಿಂಗ್' ಸೇರಿದಂತೆ ಐದಾರು ಸಿನಿಮಾಗಳಲ್ಲಿ ನಟಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.