ವಿದೇಶ

ಅಯ್ಯೋ ದುರ್ವಿಧಿಯೇ! ಫೇಸ್ ಬುಕ್ ನಲ್ಲಿ ಮುದ್ದು ಮಗನ ಅಂತ್ಯ ಸಂಸ್ಕಾರ ನೋಡಿ ಕಣ್ಣೀರಿಟ್ಟ ದಂಪತಿ

ಕೊರೋನಾ ವೈರಸ್ ನಿರ್ಬಂಧಗಳಿಂದಾಗಿ ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ದುಬೈನಲ್ಲಿದ್ದ ಭಾರತೀಯ ಕುಟುಂಬಕ್ಕೆ ಸಾಧ್ಯವಾಗದೇ, ಕೊನೆಗೆ ಫೇಸ್ ಬುಕ್ ಮೂಲಕ ಮೃತನ ಪೋಷಕರು ಅಂತಿಮ ಸಂಸ್ಕಾರ ವೀಕ್ಷಿಸಿದ ಮನಕಲಕುವ ಘಟನೆ ನಡೆದಿದೆ.

ಶಾರ್ಜಾ: ಕೊರೋನಾ ವೈರಸ್ ನಿರ್ಬಂಧಗಳಿಂದಾಗಿ ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ದುಬೈನಲ್ಲಿದ್ದ ಭಾರತೀಯ ಕುಟುಂಬಕ್ಕೆ ಸಾಧ್ಯವಾಗದೇ, ಕೊನೆಗೆ ಫೇಸ್ ಬುಕ್ ಮೂಲಕ ಮೃತನ ಪೋಷಕರು ಅಂತಿಮ ಸಂಸ್ಕಾರ ವೀಕ್ಷಿಸಿದ ಮನಕಲಕುವ ಘಟನೆ ನಡೆದಿದೆ.

16 ವರ್ಷದ ಬಾಲಕ ಜ್ಯುವೆಲ್‌ ಜಿ ಜೊಮೇ ಕ್ಯಾನ್ಸರ್‌ನಿಂದಾಗಿ ಯುಎಇಯಲ್ಲಿ ಏ.11ರಂದು  ಮೃತಪಟ್ಟಿದ್ದಾರೆ. ಏಳು ವರ್ಷ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಿದ್ದ ಈ ಬಾಲಕ ದುಬೈನ ಆಸ್ಪತ್ರೆಯಲ್ಲಿಕೊನೆ ಉಸಿರೆಳೆದಿದ್ದ. ಕೇರಳದ ತಮ್ಮ ಸ್ವಂತ ಊರಿನಲ್ಲಿ ಪುತ್ರನ ಅಂತ್ಯಸಂಸ್ಕಾರ ನಡೆಸಲು ಪೋಷಕರು ನಿರ್ಧರಿಸಿದರು.

ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಮಗನ ಪಾರ್ಥಿವ ಶರೀರದೊಂದಿಗೆ ಕೇರಳಕ್ಕೆ ತೆರಳಲು ಪೋಷಕರಿಗೆ ಅವಕಾಶ ಸಿಗಲಿಲ್ಲ, ಕಾರ್ಗೋ ವಿಮಾನದಲ್ಲಿ ಮಗನ ಶವವನ್ನು ಕೇರಳಕ್ಕೆ ಕಳುಹಿಸಿದ ದಂಪತಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳಲು ಸಾಧ್ಯವಾಲಿಲ್ಲ. 

ಸರ್ಕಾರದ  ಅನುಮತಿ ಪಡೆದು ಸರಕು ವಿಮಾನದಲ್ಲಿ ಪುತ್ರನ ಶವವನ್ನು ಕೇರಳಕ್ಕೆ ಕಳುಹಿಸಿದರು. ಅಂತ್ಯಸಂಸ್ಕಾರವನ್ನು ಫೇಸ್‌ಬುಕ್‌ ಮೂಲಕವೇ ವೀಕ್ಷಿಸಬೇಕಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT