ಸಂಗ್ರಹ ಚಿತ್ರ 
ವಿದೇಶ

ಕೊರೋನಾ ವೈರಸ್ ಗೆ ಲಸಿಕೆ ಬರಲಿದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ: ವಿಶ್ವಸಂಸ್ಥೆ! 

ಕೊರೋನಾ ವೈರಸ್ ಗೆ ಲಸಿಕೆಗಾಗಿ ಇಡೀ ಜಗತ್ತೇ ಆಶಾಭಾವನೆಯಿಂದ ಎದುರುನೋಡುತ್ತಿದೆ. ಈ ಬೆನ್ನಲ್ಲೆ ವಿಶ್ವಸಂಸ್ಥೆ ಈ ಬಗ್ಗೆ ಮಾತನಾಡಿದೆ.

ಲಂಡನ್: ಕೊರೋನಾ ವೈರಸ್ ಗೆ ಲಸಿಕೆಗಾಗಿ ಇಡೀ ಜಗತ್ತೇ ಆಶಾಭಾವನೆಯಿಂದ ಎದುರುನೋಡುತ್ತಿದೆ. ಈ ಬೆನ್ನಲ್ಲೆ ವಿಶ್ವಸಂಸ್ಥೆ ಈ ಬಗ್ಗೆ ಮಾತನಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಹೆಚ್ ಒ)ಯ ವಿಶೇಷ ರಾಯಭಾರಿ, ಡೇವಿಡ್ ನಬರೋ ಕೊರೋನಾ ಬಗ್ಗೆ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಕೋವಿಡ್-19 ಗೆ ಲಸಿಕೆ ಕಂಡುಹಿಡಿಯುವುದು ಯಶಸ್ವಿಯಾಗಲಿದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ ಎಂದು ಹೇಳಿದ್ದಾರೆ. 

ವಿಶ್ವದ ಮುಂಚೂಣಿಯಲ್ಲಿರುವ ತಜ್ಞರಲ್ಲಿ ಒಬ್ಬರಾಗಿರುವ ಡೇವಿಡ್ ನಬರೋ, ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಭೀತಿ, ಅ ಪಾಯಗಳ ನಡುವೆಯೇ ಜನತೆ ಬದುಕಬೇಕಿದೆ, ಏಕೆಂದರೆ ಇದಕ್ಕೆ ಲಸಿಕೆ ಸಿದ್ಧವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಕೆಲವು ವೈರಸ್ ಗಳಿಗೆ ಲಸಿಕೆ ಅಭಿವೃದ್ಧಿಪಡಿಸುವುದು ತುಂಬಾ ಕಷ್ಟದ ಕೆಲಸ, ಕೊರೋನಾ ವೈರಸ್ ಗೆ ರೋಗಿಗಳನ್ನು ಹಾಗೂ ಅವರ ಸಂಪರ್ಕದಲ್ಲಿರುವವರಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಐಸೊಲೇಷನ್ ನಲ್ಲಿಡುವುದಷ್ಟೇ ಸಧ್ಯಕ್ಕೆ ಇರುವ ಮಾರ್ಗ ಎಂದು ಡೇವಿಡ್ ನಬರೋ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ