ವಿದೇಶ

ಆಕ್ಸ್ ಫರ್ಡ್ ವಿ.ವಿ ಕೋವಿಡ್ 19 ಲಸಿಕೆಯನ್ನು ನಾಳೆಯಿಂದ ಮಾನವನ ಮೇಲೆ ಪ್ರಯೋಗ ಮಾಡಲಿದೆ: ಆರೋಗ್ಯ ಕಾರ್ಯದರ್ಶಿ

ಪ್ರಪಂಚವನ್ನೇ ಕಾಡುತ್ತಿರುವ ಕೋವಿಡ್-19 ವೈರಾಣು ಸೋಂಕಿಗೆ ಲಸಿಕೆಯನ್ನು ಪರಿಚಯಿಸಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಾಳೆಯಿಂದ ಮಾನವ ಪ್ರಯೋಗ ಆರಂಭಿಸಲಿದ್ದಾರೆ ಎಂದು ಇಂಗ್ಲೆಂಡ್ ಸರ್ಕಾರ ಹೇಳಿದೆ.

ಲಂಡನ್: ಪ್ರಪಂಚವನ್ನೇ ಕಾಡುತ್ತಿರುವ ಕೋವಿಡ್-19 ವೈರಾಣು ಸೋಂಕಿಗೆ ಲಸಿಕೆಯನ್ನು ಪರಿಚಯಿಸಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಾಳೆಯಿಂದ ಮಾನವ ಪ್ರಯೋಗ ಆರಂಭಿಸಲಿದ್ದಾರೆ ಎಂದು ಇಂಗ್ಲೆಂಡ್ ಸರ್ಕಾರ ಹೇಳಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಅತ್ಯಂತ ವೇಗದ ಲಸಿಕೆಯನ್ನು ಕಂಡುಹಿಡಿದು ಅಭಿವೃದ್ಧಿಪಡಿಸುತ್ತಿದ್ದು ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ ಎಂದು ಹೇಳಿದ್ದರು. ಅಲ್ಲಿನ ಪ್ರಮುಖ ಸಂಶೋಧಕ ಪ್ರೊ.ಸಾರಾ ಗಿಲ್ಬರ್ಟ್, ಸಾರ್ಸ್-ಕೊ-2 ಎಂದು ಕರೆಯಲ್ಪಡುವ ಚಡೊಕ್ಸ್1 ಲಸಿಕೆ ಕೊರೋನಾ ಸೋಂಕಿಗೆ ಸಹಾಯವಾಗಬಹುದು ಎಂದಿದ್ದರು.

ಇಂಗ್ಲೆಂಡ್ ಆರೋಗ್ಯ ಕಾರ್ಯದರ್ಶಿ ಮಟ್ಟ್ ಹೊಂಕೊಕ್, ವಿಶ್ವವಿದ್ಯಾಲಯದ ಸಂಶೋಧನಾ ತಂಡಕ್ಕೆ ಲಸಿಕೆ ಪ್ರಯೋಗಕ್ಕೆ 20 ಮಿಲಿಯನ್ ಪೌಂಡ್ ನೀಡಲಿದ್ದು ಲಂಡನ್ ನ ಇಂಪರಿಯಲ್ ಕಾಲೇಜು ಸಂಶೋಧಕರಿಗೆ ಹೆಚ್ಚುವರಿ 22.5 ಮಿಲಿಯನ್ ಪೌಂಡ್ ನೀಡಲಿದೆ ಎಂದು ಹೇಳಿದ್ದಾರೆ ಎಂದು ದ ಇಂಡಿಪೆಂಡೆಂಟ್ ವರದಿ ಮಾಡಿದೆ. ತಂಡವು ಆ ಪ್ರಯೋಗಗಳ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ ಹೀಗಾಗಿ ಆಕ್ಸ್ ಫರ್ಡ್ ಯೋಜನೆಯ ಲಸಿಕೆಯನ್ನು ಈ ಗುರುವಾರದಿಂದ ಜನರ ಮೇಲೆ ಪ್ರಯೋಗಿಸಲಾಗುವುದು ಎಂದು ಹೊಂಕೊಕ್ ಹೇಳಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಒಂದು ಲಸಿಕೆ ತಯಾರಾಗಲು 12ರಿಂದ 18 ತಿಂಗಳು ಸಮಯ ಹಿಡಿಯುತ್ತದೆ. ಆದರೆ ಈ ಕೊರೋನಾ ವೈರಸ್ ವಿರುದ್ಧದ ಲಸಿಕೆ ಬೃಹತ್ ಪ್ರಮಾಣದಲ್ಲಿ ಸದ್ಯ ತುರ್ತು ಬೇಕಾಗಿರುವುದರಿಂದ ಬೇಗನೆ ಅಭಿವೃದ್ಧಿಪಡಿಸಲು ಹೇಳಲಾಗುತ್ತಿದೆ.

ಭಾರತ ಕೂಡ ಇಂಗ್ಲೆಂಡ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಚಡೊಕ್ಸ್ 1 ಲಸಿಕೆಯ ನಿರೀಕ್ಷೆಯಲ್ಲಿದ್ದು ಕೋವಿಡ್-19 ವಿರುದ್ಧ ಉತ್ತಮ ಲಸಿಕೆಯಾಗಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT