ಜೈಶಂಕರ್ 
ವಿದೇಶ

ರಾಜತಾಂತ್ರಿಕ ಸಂಬಂಧದ ಮೇಲೆ ನಕಲಿ ಟ್ವೀಟ್ ಗಳ ಕರಿ ನೆರಳು: ಗಲ್ಫ್ ನಾಯಕರಿಗೆ ಕರೆ ಮಾಡಿದ ಮೋದಿ, ಜೈಶಂಕರ್!

ಇತ್ತೀಚಿನ ದಿನಗಳಲ್ಲಿ ಗಲ್ಫ್ ಅರಬ್ ರಾಷ್ಟ್ರಗಳಲ್ಲಿ ಕಂಡುಬರುತ್ತಿರುವ ಕೋಮು ಸಮಸ್ಯೆಯನ್ನು ಸೃಷ್ಟಿಸುವ ನಕಲಿ ಟ್ವೀಟ್ ಗಳು ಭಾರತ- ಅರಬ್ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಮೇಲೆ ಕರಿ ಛಾಯೆ ಆವರಿಸುವ ಆತಂಕ ಉಂಟುಮಾಡಿತ್ತು.

ಇತ್ತೀಚಿನ ದಿನಗಳಲ್ಲಿ ಗಲ್ಫ್ ಅರಬ್ ರಾಷ್ಟ್ರಗಳಲ್ಲಿ ಕಂಡುಬರುತ್ತಿರುವ ಕೋಮು ಸಮಸ್ಯೆಯನ್ನು ಸೃಷ್ಟಿಸುವ ನಕಲಿ ಟ್ವೀಟ್ ಗಳು ಭಾರತ- ಅರಬ್ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಮೇಲೆ ಕರಿ ಛಾಯೆ ಆವರಿಸುವ ಆತಂಕ ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸ್ವತಃ ಗಲ್ಫ್ ನಾಯಕರೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ.  

ಟ್ವಿಟರ್ ನ ನಕಲಿ ಹ್ಯಾಂಡಲ್ ಗಳಲ್ಲಿ ಹರಡುತ್ತಿರುವ ಭಾರತ ವಿರೋಧಿ, ಇಸ್ಲಾಮೋಫೋಬಿಯಾ ಆರೋಪದ ಕುರಿತ ಟ್ವೀಟ್ ಗಳು ಗಲ್ಫ್ ನಲ್ಲಿರುವ ಭಾರತೀಯರಿಗಷ್ಟೇ ಅಲ್ಲದೇ ರಾಷ್ಟ್ರಗಳ ನಡುವಿನ ಸೌಹಾರ್ದಯುತ ಸಂಬಂಧಕ್ಕೂ ಕುತ್ತು ತರುತ್ತಿತ್ತು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗಲ್ಫ್ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಖುದ್ದು ಮಾತನಾಡಿದ್ದು, ಭಾರತ-ಗಲ್ಫ್ ರಾಷ್ಟ್ರಗಳ ಸಂಬಂಧ ಹಿಂದಿನಂತೆಯೇ ಮುಂದುವರೆಯಲಿದೆ ಎಂದು ಹೇಳಿದ್ದಾರೆ. 

ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮೇ.03 ರ ಲಾಕ್ ಡೌನ್ ತೆರವಾಗುವವರೆಗೂ ವಾಪಸ್ ಕರೆಸಿಕೊಳ್ಳಲು ಭಾರತ ನಿರಾಕರಿಸಿದ್ದು, ಭಾರತೀಯರು ಸಿಲುಕಿಕೊಂಡಿರುವ ದೇಶಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

ರಂಜಾನ್ ತಿಂಗಳಲ್ಲಿ ಗಲ್ಫ್ ರಾಷ್ಟ್ರಗಳಿಗೆ ಅಗತ್ಯವಿರುವ ಆಹಾರ ಪೂರೈಕೆಯನ್ನೂ ಭಾರತ ಮಾಡಲಿದೆ ಎಂದು ಜೈಶಂಕರ್ ಹೇಳಿರುವ ಬಗ್ಗೆ ಎಂಇಎ ಮೂಲಗಳು ಮಾಹಿತಿ ನೀಡಿದೆ. ಇದೇ ವೇಳೆ ಸೌದಿ ಅರೇಬಿಯಾ, ಬಹ್ರೈನ್, ಒಮನ್, ಕತಾರ್, ಈಜಿಪ್ಟ್, ಪ್ಯಾಲೆಸ್ತೇನ್ ಗಳಿಗೆ ಭಾರತ ಹೈಡ್ರಾಕ್ಸಿ ಕ್ಲೋರೋಕ್ವಿನ್ ಹಾಗೂ ಪ್ಯಾರಸಿಟಮೋಲ್ ಗಳನ್ನು ಕಳಿಸುವುದಾಗಿ ಭರವಸೆ ನೀಡಿದೆ. 

ಈ ಎಲ್ಲಾ ಅಂಶಗಳ ಹೊರತಾಗಿ ಟ್ವಿಟರ್ ನಲ್ಲಿ ನಕಲಿ ಹಾಗೂ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆಯಾಗುವಂತಹ ಅಂಶಗಳು ಹರಡುತ್ತಿರುವುದರ ಬಗ್ಗೆಯೂ ಭಾರತ ಪ್ರಸ್ತಾಪಿಸಿದ್ದು  ಒಮನ್ ನಲ್ಲಿರುವ ಭಾರತೀಯರು ಯಾರೂ ಈ ಬಗ್ಗೆ ಆತಂಕಪಡಬೇಕಿಲ್ಲ ಎಂದು ಹೇಳಿದೆ. 

ಭಾರತದಲ್ಲಿರುವ ಮುಸ್ಲಿಮ್ ಸಹೋದರ ಸಹೋದರಿಯರ ಜೊತೆಗೆ ಒಮನ್ ನಿಲ್ಲಲಿದೆ. ಭಾರತ ಸರ್ಕಾರವೇನಾದರೂ ಮುಸ್ಲಿಮರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸದೇ ಹೋದಲ್ಲಿ, ಒಮನ್ ನಲ್ಲಿರುವ 1 ಮಿಲಿಯನ್ ಭಾರತೀಯರನ್ನು ಹೊರಹಾಕಬೇಕಾಗುತ್ತದೆ ಎಂಬ ಸಂದೇಶವನ್ನು ಒಮನ್ ರಾಜಮನೆತನದ ಸದಸ್ಯೆ ಸಯ್ಯಿದಾ ಮೋನಾ ಬಿಂಟ್ ಫಹಾದ್ ಅಲ್ ಸೈದ್ ಹೆಸರಿನ ನಕಲಿ ಟ್ವೀಟ್ ಖಾತೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ನಾಯಕರು ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT