ಕಿಮ್ ಜಾಂಗ್ ಉನ್(ಸಂಗ್ರಹ ಚಿತ್ರ) 
ವಿದೇಶ

ಕಿಮ್ ಜಾಂಗ್ ಉನ್ ಜೀವಂತವಾಗಿದ್ದು, ಆರೋಗ್ಯವಾಗಿದ್ದಾರೆ: ದಕ್ಷಿಣ ಕೊರಿಯಾ ಭದ್ರತಾ ಸಲಹೆಗಾರ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಅವರ ಉನ್ನತ ಮಟ್ಟದ ಭದ್ರತಾ ಸಲಹೆಗಾರ ಹೇಳಿದ್ದಾರೆ. ಈ ಮೂಲಕ ಕಿಮ್ ಜಾಂಗ್ ಉನ್ ಅವರ ಆನಾರೋಗ್ಯದ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಸಿಯೊಲ್(ಉತ್ತರ ಕೊರಿಯಾ): ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಅವರ ಉನ್ನತ ಮಟ್ಟದ ಭದ್ರತಾ ಸಲಹೆಗಾರ ಹೇಳಿದ್ದಾರೆ. ಈ ಮೂಲಕ ಕಿಮ್ ಜಾಂಗ್ ಉನ್ ಅವರ ಆನಾರೋಗ್ಯದ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ನಮ್ಮ ಸರ್ಕಾರದ ಸ್ಥಿತಿಗತಿ ದೃಢವಾಗಿದೆ. ಕಿಮ್ ಜಾಂಗ್ ಉನ್ ಇನ್ನೂ ಬದುಕಿದ್ದು ಆರೋಗ್ಯವಾಗಿದ್ದಾರೆ ಎಂದು ನಿನ್ನೆ ಸಿಎನ್ಎನ್ ಗೆ ನೀಡಿದ್ದ ಸಂದರ್ಶನದ ವೇಳೆ ಮೂನ್ ಜೆ-ಇನ್ ಅವರ ರಾಷ್ಟ್ರೀಯ ಭದ್ರತೆಯ ವಿಶೇಷ ಸಲಹೆಗಾರ ಮೂನ್ ಚುಂಗ್-ಇನ್ ಹೇಳಿದ್ದಾರೆ.

ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಪೂರ್ವ ಭಾಗದಲ್ಲಿರುವ ರೆಸಾರ್ಟ್ ಪಟ್ಟಣ ವೊನ್ಸನ್ ನಲ್ಲಿ ಕಳೆದ ಏಪ್ರಿಲ್ 13ರಿಂದ ನೆಲೆಸಿದ್ದು, ಇಲ್ಲಿಯವರೆಗೆ ಅವರ ಯಾವುದೇ ಶಂಕಾಸ್ಪದ ಚಲನವಲನಗಳು ಪತ್ತೆಯಾಗಿಲ್ಲ ಎಂದಿದ್ದಾರೆ.

ಏಪ್ರಿಲ್ 15 ಉತ್ತರ ಕೊರಿಯಾ ರಾಜಕೀಯ ವಿದ್ಯಮಾನ ದಿನಚರಿಯಲ್ಲಿ ಬಹಳ ಪ್ರಾಮುಖ್ಯ ದಿನ. ಕಿಮ್ ಜಾಂಗ್ ಉನ್ ಅವರ ತಾತ ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸಂಗ್ ಅವರ ಜನ್ಮದಿನಾಚರಣೆ. ಆ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಉನ್ ಗೈರಾಗಿದ್ದರು. ಇದರ ಬಳಿಕ ಅವರ ಅನಾರೋಗ್ಯದ ಬಗ್ಗೆ ತೀವ್ರ ಸಂದೇಹ,ಶಂಕೆ ವ್ಯಕ್ತವಾಗಿತ್ತು. ಕಳೆದ ಏಪ್ರಿಲ್ 11ರಂದು ವರ್ಕರ್ಸ್ ಪಾರ್ಟಿಯ ಪಾಲಿಟ್ ಬ್ಯೂರೊ ಸಭೆಯಲ್ಲಿ ಭಾಗವಹಿಸಿದ ನಂತರ ಕಿಮ್ ಜಾಂಗ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಮರುದಿನ ಅಲ್ಲಿನ ಮಾಧ್ಯಮ ಅವರು ವಿಮಾನ ರಕ್ಷಣಾ ಕೇಂದ್ರದಲ್ಲಿ ಯುದ್ಧ ವಿಮಾನವೊಂದನ್ನು ತಪಾಸಣೆ ಮಾಡುತ್ತಿರುವ ಬಗ್ಗೆ ವರದಿ ಮಾಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

T20 World Cup 2026 ಸೆಮಿಫೈನಲ್: ಸ್ಯಾಮ್ಸನ್ ಮಿಂಚಿನ ಅರ್ಧಶತಕ; ಇಂಗ್ಲೆಂಡ್ ಗೆ ಬೃಹತ್ 254 ರನ್ ಟಾರ್ಗೆಟ್ ನೀಡಿದ ಭಾರತ!

T20 World Cup Semi Final 2026: 19 ವರ್ಷಗಳ ಐತಿಹಾಸಿಕ ದಾಖಲೆ ಮುರಿದ ಸಂಜು-ಇಶಾನ್ ಕಿಶಾನ್! Video

T20 World Cup 2026: 2ನೇ ಸೆಮಿಫೈನಲ್; ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್!

ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ ಬೋಸ್ ದಿಢೀರ್ ರಾಜೀನಾಮೆ; ರವಿಗೆ ಹೆಚ್ಚುವರಿ ಜವಾಬ್ದಾರಿ

SCROLL FOR NEXT