ವಿದೇಶ

ಶ್ರೀಲಂಕಾದ ನೂತನ ಪ್ರಧಾನಿಯಾಗಿ ರಾಜಪಕ್ಷ ಪ್ರಮಾಣ ವಚನ ಸ್ವೀಕಾರ

Nagaraja AB

ಕೊಲಂಬೊ: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷ ನೂತನ ಪ್ರಧಾನಿಯಾಗಿ ಇಂದು ಪ್ರಮಾಣ
ವಚನ ಸ್ವೀಕರಿಸಿದರು. ಇತ್ತೀಚಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಪಕ್ಷ ಅವರ ಪಕ್ಷ ಭರ್ಜರಿ ಜಯಭೇರಿ ಬಾರಿಸಿತ್ತು.

ಕೆಲಾನಿಯಾದಲ್ಲಿನ ಪವಿತ್ರ ರಾಜಮಹ ವಿಹಾರಾಯದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಲಂಕಾ ಪೀಫಲ್ಸ್ ಪಾರ್ಟಿಯ ನಾಯಕರಾಗಿರುವ 74 ವರ್ಷದ ರಾಜಪಕ್ಷ ಅವರಿಗೆ ರಾಷ್ಟ್ರಪತಿ ಗೊಟಬಾಯ ರಾಜಪಕ್ಷ ಅಧಿಕಾರ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.

1970ರಲ್ಲಿ 24ನೇ ವಯಸ್ಸಿನಲ್ಲಿ ಸಂಸತ್ತ್ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ರಾಜಪಕ್ಷ, ಈ ವರ್ಷದ ಜುಲೈನಲ್ಲಿ
ಸಂಸದೀಯ ರಾಜಕೀಯದಲ್ಲಿ 50 ವರ್ಷ ಪೂರ್ಣಗೊಳಿಸಿದರು. ಅಂದಿನಿಂದ ಅವರು ಎರಡು ಬಾರಿ ರಾಷ್ಟ್ರಪತಿ
 ಹಾಗೂ ಪ್ರಧಾನಿಯಾಗಿ ಮೂರು ಬಾರಿ ಆಯ್ಕೆಯಾಗಿದ್ದರು.

SCROLL FOR NEXT