ವಿದೇಶ

ಅಲ್ ಝಜೀರಾ ಪತ್ರಕರ್ತ ಮಹಮೊದ್ ಹುಸೇನ್ ಬಂಧನ ವಿಸ್ತರಣೆ

Nagaraja AB

ಕೈರೋ: ಈಜಿಪ್ಟ್ ಅಧಿಕಾರಿಗಳು ಅಲ್ ಝಜೀರಾ  ಸುದ್ದಿವಾಹಿನಿಯ  ಪತ್ರಕರ್ತ ಮಹಮೂದ್ ಹುಸೇನ್ ಅವರ ಬಂಧನವನ್ನು 
 ಸೋಮವಾರ ಇನ್ನೂ ೪೫ ದಿನಗಳ ಕಾಲ ವಿಸ್ತರಿಸಿದ್ದಾರೆ.

ಈಜಿಪ್ಟ್  ನಾಗರೀಕರಾಗಿರುವ  ಹುಸೇನ್ ಅವರನ್ನು  ಡಿಸೆಂಬರ್ ೨೦೧೬ ರಿಂದ ಜೈಲಿನಲ್ಲಿರಿಸಲಾಗಿದೆ.ಅವರು ಖಾಸಗಿ ಭೇಟಿಗೆ ದೇಶಕ್ಕೆ  ಆಗಮಿಸಿದ ನಂತರ  ಅವರನ್ನು ಬಂಧಿಸಲಾಗಿತ್ತು. ಈಗ  ಅವರು ೧೩೦೦ ದಿನಗಳಿಗಿಂತ ಹೆಚ್ಚು ಸಮಯ ಜೈಲಿನಲ್ಲಿ ಕಳೆದಿದ್ದಾರೆ.

ಹುಸೇನ್  ಸರ್ಕಾರಿ  ಸಂಸ್ಥೆಗಳ ವಿರುದ್ಧ ಪ್ರಚೋದನೆ ಹಾಗೂ   ಗಲಭೆ  ಹಬ್ಬಿಸುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ  ಈ ಆರೋಪವನ್ನು ಅವರು ಮತ್ತು ಅಲ್ ಝಜೀರಾ ಮಾಧ್ಯಮ ಸಂಸ್ಥೆ ನಿರಾಕರಿಸಿವೆ.

SCROLL FOR NEXT