ವಿದೇಶ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಮಾದಲ್ಲಿ: ದೇಶದ ಆಡಳಿತ ಸಹೋದರಿ ಕೈಯ್ಯಲ್ಲಿ?

Shilpa D

ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಕೋಮಾಗೆ ಜಾರಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಕಿಮ್ ಜಾಂಗ್ ಸಹೋದರಿ ಕಿಮ್ ಯೊ ಜಾಂಗ್ ಅವರೇ ದೇಶದ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ಹೆಲವು ಮಾಧ್ಯಮಗಳು ವರದಿ ಮಾಡಿದೆ. 

ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಕೋಮಾದಲ್ಲಿದ್ದಾರೆ ಎಂದು ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಆಪ್ತ  ಅಧಿಕಾರಿಯೊಬ್ಬರು ಹೇಳಿದ್ದಾರೆಂದು ವರದಿ ಮಾಡಿದೆ.

‘ಕಿಮ್ ಜಾಂಗ್ ಉನ್ ಕೋಮಾದಲ್ಲಿದ್ದಾರೆ ಎಂದು ಭಾವಿಸಿದ್ದೇನೆ. ಸದ್ಯ ಉತ್ತರ ಕೊರಿಯಾದ ಆಡಳಿತ ಉನ್ ಸಹೋದರಿ ಕಿಮ್ ಯೊ ಜಾಂಗ್ ಕೈಯಲ್ಲಿದೆ’ ಎಂದೂ ಅವರು ಹೇಳಿದ್ದಾರೆ. ಕಿಮ್ ಅವರು ಇತ್ತೀಚೆಗೆ ತಮ್ಮ ಸಹೋದರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸುತ್ತಿದ್ದರು. ಇದು ಅವರು ಅನಾರೋಗ್ಯಕ್ಕೀಡಾಗಿರುವುದರ ಸಂಕೇತ ಎಂದು ದಕ್ಷಿಣ ಕೊರಿಯಾದ ರಾಜ್ಯ ವ್ಯವಹಾರಗಳ ಮೇಲ್ವಿಚಾರಣಾ ಕಚೇರಿಯ  ಮುಖ್ಯಸ್ಥರಾಗಿದ್ದ ಚಾಂಗ್ ಸಾಂಗ್ ಮಿನ್ ಹೇಳಿದ್ದಾರೆ.

ಯಾವುದೇ ಉತ್ತರ ಕೊರಿಯಾದ ನಾಯಕನು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ದಂಗೆಯ ಮೂಲಕ ತೆಗೆದುಹಾಕಲ್ಪಟ್ಟ ಹೊರತಾಗಿ ತನ್ನ ಅಧಿಕಾರವನ್ನು ಇನ್ನೊಬ್ಬ ವ್ಯಕ್ತಿಗೆ ವಹಿಸುವುದಿಲ್ಲ ಎಂದು ಚ್ಯಾಂಗ್ ಸೋಂಗ್ ಮಿನ್ ಹೇಳಿದ್ದಾರೆ. ದಕ್ಷಿಣ ಕೊರಿಯಾದ ಬೆಹುಗಾರಿಕಾ ಸಂಸ್ಥೆಯೂ ಉತ್ತರ ಕೊರಿಯಾದ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿರುವ
ಬಗ್ಗೆ ಸುಳಿವು ನೀಡಿದೆ. ಆದಾಗ್ಯೂ, ಕಿಮ್ ಆರೋಗ್ಯ ಕ್ಷೀಣಿಸುತ್ತಿದೆ ಎಂಬುದಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

SCROLL FOR NEXT