ವಿದೇಶ

ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ನಾಮನಿರ್ದೇಶನಕ್ಕೆ ಮೈಕ್ ಪೆನ್ಸ್ ಅಂಗೀಕಾರ

Srinivas Rao BV

ವಾಷಿಂಗ್ ಟನ್: ಮೈಕ್ ಪೆನ್ಸ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮನಿರ್ದೇಶನವನ್ನು ಅಂಗೀಕರಿಸಿದ್ದಾರೆ. 

ನ್ಯಾಷನಲ್ ರಿಪಬ್ಲಿಕನ್ ಕನ್ವೆನ್ಷನ್ ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮೈಕ್ ಪೆನ್ಸ್ ಹೆಸರನ್ನು ಘೋಷಣೆ ಮಾಡಲಾಗಿದೆ. 

ನಾಲ್ಕು ವರ್ಷಗಳ ಹಿಂದೆ ಇದೇ ಉಪಾಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿ ಕರೆಗೆ ಓಗೊಟ್ಟಿದ್ದೆ ಏಕೆಂದರೆಅಮೆರಿಕವನ್ನು ಮತ್ತೊಮ್ಮೆ ಮಹಾನ್ ರಾಷ್ಟ್ರವನ್ನಾಗಿ ಮಾಡುವ ನಾಯಕತ್ವ ಹಾಗೂ ದೂರದೃಷ್ಟಿ ಡೊನಾಲ್ಡ್ ಟ್ರಂಪ್ ಅವರಲ್ಲಿತ್ತು ಎಂಬುದು ನನಗೆ ತಿಳಿದಿತ್ತು ಎಂದು ಪೆನ್ಸ್ ಹೇಳಿದ್ದಾರೆ. 

ಕಳೆದ ನಾಲ್ಕು ವರ್ಷಗಳಿಂದ ಟ್ರಂಪ್ ಅವರು ಸತತ ದಾಳಿಗಳನ್ನು ಸಹಿಸಿಕೊಂಡಿರುವುದನ್ನು ನೋಡಿದ್ದೇನೆ, ಆದರೆ ಪ್ರತಿ ದಿನವೂ ಅವರ ಮಾತನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುತ್ತಿದ್ದಾರೆ ಎಂದು ಪೆನ್ಸ್ ಹೇಳಿದ್ದಾರೆ. 

SCROLL FOR NEXT