ವಿದೇಶ

ಭಾರತದ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿಯಿಂದಲೂ ಬೆಂಬಲ!

Srinivas Rao BV

ಶಾಂತಿಯುತ ಪ್ರತಿಭಟನೆಗೆ ಕೆನಡಾ ಎಂದಿಗೂ ಬೆಂಬಲಿಸಲಿದೆ ಎಂದು ಹೇಳುವ ಮೂಲಕ ಭಾರತದಲ್ಲಿ ರೈತರು ಹೊಸ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. 

ರೈತರ ಪ್ರತಿಭಟನೆಯನ್ನು ಆತಂಕಕಾರಿ ಪರಿಸ್ಥಿತಿ ಎಂದು ಹೇಳಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಗುರು ನಾನಕ್ ಜಯಂತಿಯ ಆಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಫೇಸ್ ಬುಕ್ ವಿಡಿಯೋ ಮೂಲಕ ಮಾತನಾಡುತ್ತಿದ್ದರು.

ಭಾರತದಲ್ಲಿ ರೈತರು ಹೊಸ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಗುರುತಿಸದೇ ಮಾತನಾಡಿದಲ್ಲಿ ನಾನು ಅಜಾಗರೂಕನಾಗುತ್ತೇನೆ, ಪರಿಸ್ಥಿತಿ ಆತಂಕಕಾರಿಯಾಗಿದ್ದು, ನಾವು ಸ್ನೇಹಿತರು ಹಾಗೂ ಸಂಬಧಿಕರ ಬಗ್ಗೆ ಚಿಂತಿತರಾಗಿದ್ದೇವೆ ಎಂದು ಹೇಳಿದ್ದಾರೆ.

ಕೆನಡಾ ಶಾಂತಿಯುತ ಪ್ರತಿಭಟನೆಗಳನ್ನು ಎಂದಿಗೂ ಬೆಂಬಲಿಸಲಿದೆ. ಮಾತುಕತೆಯಲ್ಲಿನ ಮಹತ್ವವನ್ನು ನಾವೂ ನಂಬುತ್ತೇವೆ. ನಾವು ನಮ್ಮ ಆತಂಕಗಳನ್ನು ನೇರವಾಗಿ ಹಲವು ವಿಧಾನಗಳ ಮೂಲಕ ಭಾರತೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ ಎಂದೂ ಕೆನಡಾ ಪ್ರಧಾನಿ ತಿಳಿಸಿದ್ದಾರೆ.

SCROLL FOR NEXT