ಮೌಂಟ್ ಎವರೆಸ್ಟ್ 
ವಿದೇಶ

ಮೌಂಟ್ ಎವರೆಸ್ಟ್ ನ ಎತ್ತರ ಎಷ್ಟು?: ವಿಶ್ವದ ಅತಿದೊಡ್ಡ ಶಿಖರದ ಪರಿಷ್ಕೃತ ಎತ್ತರ ಮಂಗಳವಾರ ಘೋಷಣೆ!

ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಶಿಖರ ಎಂದೇ ಖ್ಯಾತಿಗಳಿಸಿರುವ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ಇದೇ ಮಂಗಳವಾರ ನೇಪಾಳ ಸರ್ಕಾರ ಮಾಹಿತಿ ನೀಡಲಿದೆ.

ಕಠ್ಮಂಡು: ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಶಿಖರ ಎಂದೇ ಖ್ಯಾತಿಗಳಿಸಿರುವ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ಇದೇ ಮಂಗಳವಾರ ನೇಪಾಳ ಸರ್ಕಾರ ಮಾಹಿತಿ ನೀಡಲಿದೆ.

ಹೌದು... ಇದೇ ಮಂಗಳವಾರ ವಿಶ್ವದ ಅತೀ ಎತ್ತರದ ಶಿಖರದ ನಿಜವಾದ ಎತ್ತರವನ್ನು ನೇಪಾಳ ಸರ್ಕಾರ ಘೋಷಣೆ ಮಾಡಲಿದೆ. ಇದಕ್ಕಾಗಿಯೇ ಮಂಗಳವಾರ ನೇಪಾಳ ಸರ್ಕಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಕಾರ್ಯಕ್ರಮದ ಕುರಿತು ವಿಶೇಷ ಆಹ್ವಾನ  ನೀಡಿದೆ. ಈ ಕಾರ್ಯಕ್ರಮದಲ್ಲಿ ನೇಪಾಳದ ಸರ್ವೇ ಇಲಾಖೆ ಮಂಗಳವಾರ ಮೌಂಟ್ ಎವರೆಸ್ಟ್ ನ ಅಧಿಕೃತ ಎತ್ತರವನ್ನು ಘೋಷಣೆ ಮಾಡಲಿದೆ. ಇದೇ ಕಾರ್ಯಕ್ರಮದಲ್ಲಿ ಮೌಂಟ್ ಎವರೆಸ್ಟ್ ನ ಸರ್ವೇ ಕಾರ್ಯದಲ್ಲಿ ಭಾಗಿಯಾಗಿದ್ದವರನ್ನು ಕೂಡ ಸನ್ಮಾನಿಸಲಾಗುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಘೋಷಣೆ  ಮಾಡಲಾಗಿದೆ ಎಂದು ಹಿಮಾಲಯದ ಸಮೀಕ್ಷಾ ವಿಭಾಗದ ಉಪ ಮಹಾನಿರ್ದೇಶಕ ಸುಶೀಲ್ ನರಸಿಂಗ್ ರಾಜ್‌ಭಂಡಾರಿ ಹೇಳಿದ್ದಾರೆ.

2015ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನೇಪಾಳ ಭೂಕಂಪನದ ಬಳಿಕ ಮೌಂಟ್ ಎವರೆಸ್ಟ್ ನ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂದು ತಜ್ಞರು ಶಂಕಿಸಿದ್ದರು. ಇದೇ ಕಾರಣಕ್ಕೆ ನೇಪಾಳ ಸರ್ಕಾರ ವಿಶ್ವದ ಅತಿ ಎತ್ತರದ ಶಿಖರದ ಎತ್ತರವನ್ನು ಅಳೆಯುವ ಯೋಜನೆ ಕೈಗೆತ್ತಿಕೊಂಡಿತ್ತು, ಪರ್ವತದ  ಎತ್ತರವನ್ನು ಪುನಃ ಅಳೆಯಲು ನೇಪಾಳಿ ಅಧಿಕಾರಿಗಳು ಮತ್ತು ತಜ್ಞರನ್ನು ನಿಯೋಜಿಸುವಾಗ, ನೇಪಾಳ ಸರ್ಕಾರವು ತನ್ನ ದೇಶೀಯ ಪ್ರಯತ್ನಗಳಲ್ಲಿ ಚೀನಾದೊಂದಿಗೆ ಸಮನ್ವಯ ಸಾಧಿಸಿತು. 2019 ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನೇಪಾಳ ಭೇಟಿಯ ಸಂದರ್ಭದಲ್ಲಿ, ಉಭಯ ರಾಷ್ಟ್ರಗಳು  ಜಂಟಿಯಾಗಿ ವಿಶ್ವದ ಅತಿ ಎತ್ತರದ ಶಿಖರದ ಎತ್ತರವನ್ನು ಅಳೆದು ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಿದವು.

ಇದೀಗ ಈ ಸರ್ವೇ ಕಾರ್ಯ ಮುಕ್ತಾಯವಾಗಿದ್ದು, ನಾಳೆ ಅಂದರೆ ಮಂಗಳವಾರ ಅಧಿಕೃತವಾಗಿ ಶಿಖರದ ಎತ್ತರವನ್ನು ಘೋಷಣೆ ಮಾಡಲಾಗುತ್ತದೆ.

ಇನ್ನು 1954ರಲ್ಲಿ ಸರ್ವೆ ಆಫ್ ಇಂಡಿಯಾ ಈ ಶಿಖರವನ್ನು ಅಳೆದಿತ್ತು. ಅಂದು ಸರ್ವೇ ಆಫ್ ಇಂಡಿಯಾ ಘೋಷಣೆ ಮಾಡಿದ್ದ 8,848 ಮೀಟರ್ ಎತ್ತರವೇ ಮೌಂಟ್ ಎವರೆಸ್ಟ್ ನ ಅಂಗೀಕರಿಸಲ್ಪಟ್ಟ ಮತ್ತು ಗುರುತಿಸಲ್ಪಟ್ಟ ಎತ್ತರವಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT