ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯ ಪುನರರಾಂಭ
ನೇಪಾಳ ದೇಶದ ಸುಪ್ರಸಿದ್ಧ ಪಶು ಪತಿನಾಥ ದೇಗುಲವನ್ನು ಭಕ್ತರ ಸಂದರ್ಶನಕ್ಕಾಗಿ ಬುಧವಾರದಿಂದ ಮತ್ತೆ ತೆರೆಯಲಾಗಿದೆ.
ಕಠ್ಮಂಡು: ನೇಪಾಳ ದೇಶದ ಸುಪ್ರಸಿದ್ಧ ಪಶು ಪತಿನಾಥ ದೇಗುಲವನ್ನು ಭಕ್ತರ ಸಂದರ್ಶನಕ್ಕಾಗಿ ಬುಧವಾರದಿಂದ ಮತ್ತೆ ತೆರೆಯಲಾಗಿದೆ. ಕೊರೊನಾದಿಂದಾಗಿ ಮುಚ್ಚಲಾಗಿದ್ದ ಪಶುಪತಿನಾಥ ದೇವಾಲಯವನ್ನು ಮತ್ತೆ ತೆರೆಯಲಾಗಿದೆ ಎಂದು ಪಶುಪತಿ ಏರಿಯಾ ಡೆವಲೆಪ್ ಮೆಂಟ್ ಟ್ರಸ್ಟ್ ತಿಳಿಸಿದೆ.
ಕೊರೊನಾ ಕಾರಣದಿಂದ ಮುಚ್ಚಿದ್ದ ಪಶುಪತಿನಾಥ ದೇವಾಲಯವನ್ನು ಸುದೀರ್ಘ ಸಮಯದ ನಂತರ ಮತ್ತೆ ತೆರೆಯಲು ಕ್ಷಮಾಪಣೆ ಕೋರಿ ದೇಗುಲದಲ್ಲಿ ಮಂಗಳವಾರ ಪ್ರಾಯಶ್ಚಿತ ಆರಾಧನೆ ನಡೆಸಲಾಯಿತು.
ಕೋವಿಡ್ -19 ಮಾರ್ಗಸೂಚಿ ಅನ್ವಯ ಭಕ್ತರಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅವಕಾಶವಿದೆ ಎಂದು ಪಶುಪತಿ ಟ್ರಸ್ಟ್ ಸದಸ್ಯ ಪ್ರದೀಪ್ ಧಕಲ್ ತಿಳಿಸಿದ್ದಾರೆ.
ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇವಾಲಯ ತರೆದಿದ್ದರೂ ವಿಶೇಷ ಪೂಜೆಗಳು, ಶ್ಲೋಕಗಳ ಪಠಣ, ಮತ್ತಿತರ ಧಾರ್ಮಿಕ ಚಟುವಟಿಕೆ ನಡಸುವುದಿಲ್ಲ. ಈ ಚಟುವಟಿಕೆಗಳನ್ನು ಕ್ರಮೇಣ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.