ವಿದೇಶ

ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆ!

Srinivas Rao BV

ನವದೆಹಲಿ: ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೋನಾ ವೈರಾಣು ಪತ್ತೆಯಾಗಿರುವ ಬೆನ್ನಲ್ಲೇ ಈಗ ದಕ್ಷಿಣ ಆಫ್ರಿಕಾದಲ್ಲಿ ಹೊಸ ಮಾದರಿಯ ಕೋವಿಡ್-19 ವೈರಾಣುವಿನ 2 ಪ್ರಕರಣಗಳು ಪತ್ತೆಯಾಗಿದೆ. 

ಬ್ರಿಟನ್ ಈ ಹೊಸ ಮಾದರಿಯ ಕೋವಿಡ್-19 ವೈರಾಣು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವುದನ್ನು ದೃಢಪಡಿಸಿದೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೊಸ ಮಾದರಿಯ ವೈರಾಣು ವ್ಯಾಪಕವಾಗಿ ಹರಡುತ್ತಿರುವ ರೀತಿಯಲ್ಲೇ ದಕ್ಷಿಣ ಆಫ್ರಿಕಾದಲ್ಲೂ ವೈರಾಣು ಹರಡುತ್ತಿದ್ದು ಎರಡನೇ ಅಲೆ ಪ್ರಾರಂಭವಾಗಿದೆ ಎಂದು ತಜ್ಞರು ಹೇಳಿದ್ದಾರೆ. 

ಎರಡೂ ಪ್ರಕರಣಗಳು ದಕ್ಷಿಣ ಆಫ್ರಿಕಾದಿಂದ ಬಂದವರಿಂದಲೇ ಹೊಸ ಮಾದರಿಯ ಕೊರೋನಾ ದೃಢಪಟ್ಟಿದೆ ಎಂದು ಬ್ರಿಟನ್ ನ ಆರೋಗ್ಯ ಸಚಿವ ಮ್ಯಾಟ್ ಕಾನ್ಕಾಕ್ ಹೇಳಿದ್ದಾರೆ.

ಬ್ರಿಟನ್ ನಲ್ಲಿ ಪತ್ತೆಯಾಗಿರುವ ವೈರಾಣು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ, ಆದರೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಈ ಹೊಸ ವೈರಾಣು ಬ್ರಿಟನ್ ನಲ್ಲಿ ಕಂಡುಬಂದಿರುವ ವೈರಾಣುವಿಗಿಂತಲೂ ರೂಪಾಂತರಗೊಂಡಿರುವ ವೈರಸ್ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
 

SCROLL FOR NEXT