ವಿದೇಶ

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ ಪ್ರಕರಣ: 26 ಮಂದಿಯ ಬಂಧನ! 

Srinivas Rao BV

ಕರಕ್: ಪಾಕಿಸ್ತಾನದ ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವೊಂದನ್ನು ನಾಶಪಡಿಸಿ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ 26 ಮಂದಿಯನ್ನು ಬಂಧಿಸಲಾಗಿದೆ.  

ತೀವ್ರಗಾಮಿಗಳ ಸಂಘಟನೆಯಾದ ಜಮಾತ್ ಉಲೇಮಾ-ಎ- ಇಸ್ಲಾಮ್ ಪಕ್ಷದ ನಾಯಕ ರೆಹಮತ್ ಸಲ್ಮಾನ್ ಖಟ್ಟಕ್ ಈ ಬಂಧಿತ 26 ಮಂದಿಯ ಪೈಕಿ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಸ್ಟೇಷನ್ ಹೌಸ್ ಆಫೀಸರ್ ರೆಹಮತುಲ್ಲಾ ಖಾನ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. 

ಜಮಾತ್ ಉಲೇಮಾ-ಎ- ಇಸ್ಲಾಮ್ ಪಕ್ಷದ ಬೆಂಬಲಿಗರ ನೇತೃತ್ವದ ಗುಂಪು ದೆವಾಲಯದ ಕಾಮಗಾರಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಇಡೀ ದೇವಾಲಯವನ್ನೇ ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ಸಮುದಾಯದ ವಿರುದ್ಧದ ಕೃತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು ವ್ಯಾಪಕವಾಗಿ ಖಂಡಿಸಿದ್ದಾರೆ.

ಖೈಬರ್ ಪಖ್ತುಂಕ್ವಾದ ಸಿಎಂ ಮೆಹಮೂದ್ ಖಾನ್ ಈ ದಾಳಿಯನ್ನು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ. 

SCROLL FOR NEXT