ವಿದೇಶ

'ಕೊರೊನಾ' ದಾಳಿ:ಚೀನಾದಲ್ಲಿ ಮೃತರ ಸಂಖ್ಯೆ 425ಕ್ಕೆ ಏರಿಕೆ

ಜಗತ್ತಿನಲ್ಲಿ ಈಗ ಬಹು ಚರ್ಚಿತವಾಗುವ ವಿಷಯ ಕೊರೊನಾ ವೈರಸ್ ಸೋಂಕು. ಇದು ಮೊದಲು ಕಾಣಿಸಿಕೊಂಡಿರುವುದು ಚೀನಾದ ವುಹಾನ್ ಪ್ರಾಂತ್ಯದಲ್ಲಿ. ಚೀನಾದಲ್ಲಿ ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 425ಕ್ಕೇರಿದೆ.

ಬೀಜಿಂಗ್: ಜಗತ್ತಿನಲ್ಲಿ ಈಗ ಬಹು ಚರ್ಚಿತವಾಗುವ ವಿಷಯ ಕೊರೊನಾ ವೈರಸ್ ಸೋಂಕು. ಇದು ಮೊದಲು ಕಾಣಿಸಿಕೊಂಡಿರುವುದು ಚೀನಾದ ವುಹಾನ್ ಪ್ರಾಂತ್ಯದಲ್ಲಿ. ಚೀನಾ ದೇಶದಲ್ಲಿ ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 425ಕ್ಕೇರಿದೆ. ಅಲ್ಲಿ ಇದುವರೆಗೆ ಒಟ್ಟು 20 ಸಾವಿರದ 438 ಮಂದಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.


ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಗಳು ಸಾಕಾಗದೆ ಕಳೆದ 10 ದಿನಗಳಲ್ಲಿ ಚೀನಾ ಸರ್ಕಾರ ಹೊಸ ಸಾವಿರ ಬೆಡ್ ಗಳಿರುವ ಮತ್ತು ಒಂದೂವರೆ ಸಾವಿರ ಬೆಡ್ ಗಳಿರುವ ವಿಶೇಷ ಆಸ್ಪತ್ರೆಗಳನ್ನು ತೆರೆದಿದ್ದು ಅಲ್ಲಿ  ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ಕೊರೊನಾ ವೈರಸ್ ನಿಂದ ಚೀನಾದ ಹಣಕಾಸು ವಲಯ ತೀವ್ರ ಕುಸಿದಿದೆ. ವೈರಸ್ ಇನ್ನಷ್ಟು ಹರಡದಂತೆ ತಡೆಗಟ್ಟಲು ಜನರ ಓಡಾಟ ಮತ್ತು ಚೀನಾ ದೇಶಕ್ಕೆ ಪ್ರಯಾಣವನ್ನು ನಿರ್ಬಂಧಿಸಿರುವುದರಿಂದ ಚೀನಾಕ್ಕೆ ಇದರಿಂದ ಹಲವು ಕ್ಷೇತ್ರಗಳಲ್ಲಿ ಹೊಡೆತ ಬಿದ್ದಿದೆ. ಚೀನಾದಲ್ಲಿ ಇನ್ನೂ ಸಾವಿರಾರು ಜನರ ವೈದ್ಯಕೀಯ ತಪಾಸಣೆ ಮಾಡಿ ವರದಿ ಹೊರಬರಲು ಬಾಕಿ ಇರುವುದರಿಂದ ಕೊರೊನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ವ ವ್ಯಾಪಾರ ಸಂಘಟನೆ ತಿಳಿಸಿದೆ.


ಈ ಸೋಂಕಿನ ವಿರುದ್ಧ ಜನರ ಹೋರಾಟವನ್ನು ನಾವು ಆರಂಭಿಸಿದ್ದೇವೆ. ವೈರಸ್ ನ್ನು ತಡೆಗಟ್ಟಲು ದೇಶದ ಪಾಲಿಟ್ ಬ್ಯೂರೋ ಸ್ಥಾಯಿ ಸಮಿತಿ ತಡೆಗಟ್ಟಲು ಪ್ರಯತ್ನಿಸಬೇಕಾಗಿದ್ದು ಯಾರು ತಮ್ಮ ಕರ್ತವ್ಯವನ್ನು ನಿಭಾಯಿಸಲು ವಿಫಲರಾದರೆ ಅವರನ್ನು ಶಿಕ್ಷಿಸಲಾಗುವುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ