ಇಸ್ತಾಂಬುಲ್: ರನ್ ವೇಯಲ್ಲಿ ಸ್ಕೀಡಾಗಿ ತುಂಡು ತುಂಡಾದ ವಿಮಾನ ,120 ಪ್ರಯಾಣಿಕರು ಗಾಯ
ಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕೀಡಾಗಿ ತುಂಡು ತುಂಡಾಗಿರುವ ಘಟನೆ ನಡೆದಿದೆ.
ಇಸ್ತಾಂಬುಲ್ : ಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕೀಡಾಗಿ ತುಂಡು ತುಂಡಾಗಿರುವ ಘಟನೆ ನಡೆದಿದೆ.
ತುಂಡಾದ ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗಾಯಗೊಂಡಿರುವ 120 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಡಳಿತ ಸಂಸ್ಥೆಗಳು ತಿಳಿಸಿವೆ.
177 ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಕಡಿಮೆ ಬೆಲೆಯ ಪೆಗಾಸಸ್ ಏರ್ ಲೈನ್ಸ್ ವಿಮಾನ ಪಶ್ಚಿಮ ಟರ್ಕಿಶ್ ನ ಇಜ್ಮಿರ್ ನಿಂದ ಇಸ್ತಾಂಬುಲ್ ನ ಸಬಿಹಾ ಗೊಕ್ಸೆನ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ತುರ್ತು ಭೂ ಸ್ಪರ್ಶದಿಂದಾಗಿ ಈ ಘಟನೆ ನಡೆದಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.