ವಿದೇಶ

ಫೆ.23 ರಿಂದ 26 ರವರೆಗೆ ಟ್ರಂಪ್ ಭಾರತ ಭೇಟಿ

Srinivasamurthy VN

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಫೆ. 23 ರಿಂದ 26 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಇದೇ ಮೊದಲ ಬಾರಿಗೆ ಮುಂಬರುವ ಫೆ.23ರಿಂದ ಫೆ.26ರವರೆಗೆ ಭಾರತಕ್ಕೆ ಭೇಟಿ ನೀಡಲಿರುವ ಟ್ರಂಪ್ ನವದೆಹಲಿಯಲ್ಲಿ ಉನ್ನತ ಮಟ್ಟ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಹಲವು ನಗರಗಳಿಗೂ ಭೇಟಿ ನೀಡಲಿದ್ದಾರೆ. ಭೇಟಿ ಸಂದರ್ಭದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ರಕ್ಷಣಾ ಸಹಕಾರ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಅವರು ಆಗ್ರಾ ಮತ್ತು ಅಹಮದಾಬಾದ್ ಗೆ ಭೇಟಿ ನೀಡಲಿದ್ದಾರೆ. ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗಿನ ಹಲವು ವ್ಯಾಪಾರ ವಹಿವಾಟುಗಳನ್ನು ಅಂತಿಮಗೊಳಿಸಲಿದ್ದಾರೆ. 

ಮೂಲಗಳ ಪ್ರಕಾರ ಆಗ್ರಾ ಹಾಗೂ ಅಹಮದಾಬಾದ್‍ಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದ ವಾರವೇ ಅಮೆರಿಕಾದ ಕೆಲ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದು, ಹಲವು ಸಿದ್ಧತೆಗಳನ್ನು ಮಾಡಿದ್ದಾರೆ. ಟ್ರಂಪ್ ಭೇಟಿ ವೇಳೆ ರಕ್ಷಣಾ ಸಹಕಾರ ಪ್ರಮುಖ ವಿಷಯವಾಗಲಿದ್ದು, ಭಾರತದಿಂದ ರಫ್ತಾಗುತ್ತಿರುವ ಸ್ಟೀಲ್ ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಬಗ್ಗೆ ಭಾರತದ ಕಡೆಯಿಂದ ಪ್ರಸ್ತಾಪವು ವ್ಯಕ್ತವಾಗಲಿದೆ ಎನ್ನಲಾಗಿದೆ. ಇದಲ್ಲದೆ ಕೃಷಿ ಉತ್ಪನ್ನಗಳು, ಹೈನುಗಾರಿಕೆ, ಔಷಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಅಮೆರಿಕದ ಕಂಪೆನಿಗಳು ಉತ್ಸುಕವಾಗಿದೆ. ಭಾರತದ ವಿಶಾಲ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಅತಿ ಹೆಚ್ಚು ವಿಸ್ತರಿಸಲು ತಯಾರಿ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. 

ಗಣರಾಜ್ಯೋತ್ಸವದ ಅತಿಥಿಯಾಗಿ ಟ್ರಂಪ್‍ಗೆ ಆಹ್ವಾನ ನೀಡಿತ್ತು. ಅವರ ಕಾರ್ಯಕ್ರಮಗಳ ಒತ್ತಡದಿಂದ ಬರಲು ಸಾಧ್ಯವಾಗಲಿಲ್ಲ. ಇದರ ನಡುವೆ ಅನಿವಾಸಿ ಭಾರತೀಯರು ಅಮೆರಿಕದಲ್ಲಿ ಅತಿ ಹೆಚ್ಚು ವಾಸವಾಗಿರುವುದರಿಂದ ಅವರನ್ನು ಓಲೈಸುವ ಕೆಲಸವೂ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದೇ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಭೇಟಿ ಭಾರೀ ಕುತೂಹಲ ಕೆರಳಿಸಿದೆ.

SCROLL FOR NEXT