ವಿದೇಶ

ಹುಬೈ ಪ್ರಾಂತ್ಯ ಹೊರತುಪಡಿಸಿ ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಶೇ 42.8 ರಷ್ಟು ಇಳಿಮುಖ

Srinivas Rao BV

ಬೀಜಿಂಗ್: ಹುಬೈ ಕೇಂದ್ರೀಯ ಪ್ರಾಂತ್ಯದ ಹೊರಗೆ ಮತ್ತು ಇಡೀ ಚೀನಾದಲ್ಲಿ ಕಳೆದ ಒಂದು ವಾರದಲ್ಲಿ ಕೊರೊನ ವೈರಸ್ ಸೋಂಕು ಪ್ರಕರಣಗಳಲ್ಲಿ ಶೇ 40ರಷ್ಟು ಇಳಿಮುಖವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ವಕ್ತಾರ ಮಿ ಫೆಂಗ್ ಭಾನುವಾರ ಹೇಳಿದ್ದಾರೆ.

ಮಾರಕ ಸೋಂಕು ತಡೆದಗೆ ಸರ್ಕಾರ ತೆಗೆದುಕೊಂಡು ಮುನ್ನೆಚ್ಚರಿಕೆ ಮತ್ತು ನಿಯಂತ್ರಣಾ ಕಾರ್ಯವಿಧಾನಗಳು ಉತ್ತಮ ಫಲಿತಾಂಶ ತೋರಿವೆ ಎಂದು ಅವರು ಹೇಳಿದ್ದಾರೆ. ‘ದೇಶಾದ್ಯಂತ, ಹುಬೈ ಪ್ರಾಂತ್ಯವನ್ನು ಹೊರತುಪಡಿಸಿ, ದೃಢಪಟ್ಟ ಕೊರೋನ ವೈರಸ್  ಪ್ರಕರಣಗಳ ಸಂಖ್ಯೆ ಫೆ 3 (890 ಪ್ರಕರಣಗಳು)ರಿಂದ ಫೆ 8 ರವರೆಗೆ (509 ಪ್ರಕರಣಗಳು) ಶೇ 42.8ರಷ್ಟು ಕಡಿಮೆಯಾಗಿದೆ.’ ಮಿ ಫೆಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

SCROLL FOR NEXT