ಫಿಲಿಪೈನ್ಸ್: ಮೊದಲ ಕೊರೋನಾ ಸೋಂಕು ತಗುಲಿದ ಮಹಿಳೆ ಗುಣಮುಖ
ಫಿಲಿಪೈನ್ಸ್ ನಲ್ಲಿ ಕೊರೋನಾ ವೈರಾಣು ಸೋಂಕಿಗೆ ಗುರಿಯಾಗಿದ್ದ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಮನಿಲಾ: ಫಿಲಿಪೈನ್ಸ್ ನಲ್ಲಿ ಕೊರೋನಾ ವೈರಾಣು ಸೋಂಕಿಗೆ ಗುರಿಯಾಗಿದ್ದ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇದು ದೇಶದಲ್ಲಿ ಪತ್ತೆಯಾಗಿದ್ದ ಮೊದಲ ಸೋಂಕು ಪ್ರಕರಣವಾಗಿತ್ತು. 38 ವರ್ಷದ ಚೀನಿ ಮಹಿಳೆ ವುಹಾನ್ ನಗರದಿಂದ ಜ. 21ಕ್ಕೆ ಹಾಂಗ್ ಕಾಂಗ್ ಮೂಲಕ ಫಿಲಿಪೈನ್ಸ್ ಗೆ ಆಗಮಿಸಿದ್ದರು.
ನಂತರ ಆಕೆ ಹಾಗೂ 44 ವರ್ಷದ ಪುರುಷರನ್ನು ತಪಾಸಣೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಇವರಲ್ಲಿ ಪುರುಷ ರೋಗಿ ಫೆ. 1ರಂದು ಮೃತಪಟ್ಟಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.