ಲಿಫ್ಟ್ ನಲ್ಲಿ ಮೈ ಮೇಲೆ ಕೈ ಹಾಕಿದ ಯುವಕನಿಗೆ ಏಕಾಂಗಿ ಮಹಿಳೆ ಬುದ್ಧಿ ಕಲಿಸಿದ್ದೇಗೆ, ಈ ವಿಡಿಯೋ ನೋಡಿ!
ಏಕಾಂಗಿ ಮಹಿಳೆಯರನ್ನು ಕಂಡಾಗ ಗಂಡಸಿನಲ್ಲಿ ಅಂದೆಂತದ್ದೊ ವಿಕೃತಿ ಮೂಡುತ್ತದೆ. ಅದೇ ರೀತಿ ಲಿಫ್ಟ್ ನಲ್ಲಿ ಒಂಟಿಯಾಗಿದ್ದ ಮಹಿಳೆಯ ಮೇಲೆ ಯುವಕನೋರ್ವ ಕೈ ಹಾಕಿದ್ದು ಆಗ ಮಹಿಳೆ ತನ್ನ ಆತ್ಮರಕ್ಷಣೆ ಹೇಗೆ ಮಾಡಿಕೊಂಡಲು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಲಿಫ್ಟ್ ನಲ್ಲಿ ಮಹಿಳೆಯನ್ನು ದುರುಗುಟ್ಟಿಕೊಂಡು ನೋಡಿದ ಯುವಕ ನಂತರ ಆಕೆಯ ಹಿಂದೆ ಹೋಗುತ್ತಾನೆ. ನಂತರ ಆಕೆಯ ಹತ್ತಿರಕ್ಕೆ ಬಂದು ಹೆಗಲ ಮೇಲೆ ಕೈ ಹಾಕುತ್ತಾನೆ. ಆಗ ಕೂಡಲೇ ಮಹಿಳೆ ಆತನ ಕಪಾಳಕ್ಕೆ ಜೋರಾಗಿ ಹೊಡೆಯುತ್ತಾಳೆ.
ಕೆಳಗೆ ಬಿದ್ದ ಆತ ಮತ್ತೆ ಸಾವರಿಸಿಕೊಂಡು ಮೇಲಕ್ಕೆ ಏಳುತ್ತಾನೆ. ಆಗ ಮಹಿಳೆ ಆತನ ಮಾರ್ಮಾಂಗಕ್ಕೆ ಜೋರಾಗಿ ಹೊದೆಯುತ್ತಾಳೆ. ನಂತರ ಆತನ ತಲೆಗೆ ಕಾಲಿನಿಂದ ಹೊದೆಯುತ್ತಾಳೆ ನೋವಿನಿಂದಾಗಿ ಆತ ಕೆಳಗೆ ಬಿದ್ದು ಒದ್ದಾಡುತ್ತಾನೆ. ಈ ವೇಳೆ ಲಿಫ್ಟ್ ಒಪನ್ ಆಗಿದ್ದರಿಂದ ಮಹಿಳೆ ಹೊರಗೆ ಹೋಗುತ್ತಾಳೆ. ಈ ವಿಡಿಯೋ ಲಿಫ್ಟ್ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.