ವಿದೇಶ

ಮಲೇಷ್ಯಾ ಮುಂದಿನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಆಯ್ಕೆ: ವರದಿ

Srinivasamurthy VN

ಕೌಲಾಲಂಪುರ: ಮಲೇಷ್ಯಾ ಮುಂದಿನ ಪ್ರಧಾನಿಯಾಗಿ ಪಗೋಹ್ ಸಂಸದ ಮುಹಿದ್ದೀನ್ ಯಾಸಿನ್ ರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜಮನೆತನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದೊಂದು ವಾರದಿಂದ ಮಲೇಷ್ಯಾದಲ್ಲಿ ನಡೆಯುತ್ತಿದ್ದ ಅಧಿಕಾರ ಭಿನ್ನಮತಕ್ಕೆ ಕೊನೆಗೂ ಮಲೇಷ್ಯಾ ರಾಜಮನೆತನ ಅಲ್ಪ ವಿರಾಮ ಹಾಕಿದ್ದು, ಪಗೋಹ್ ಕ್ಷೇತ್ರದ ಸಂಸದ ಮುಹಿದ್ದೀನ್ ಯಾಸಿನ್ ರನ್ನು ಮಲೇಷ್ಯಾದ ಮುಂದಿನ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಈ ಕುರಿತಂತೆ ರಾಜಮನೆತನದ ವಕ್ತಾರ ಅಹ್ಮದ್ ಫಾದಿಲ್ ಷಮ್ಸುದ್ದೀನ್ ಹೇಳಿಕೆ ಬಿಡುಗಡೆ ಮಾಡಿದ್ದು, ಮಲೇಷ್ಯಾದ ರಾಜ ಅಬ್ದುಲ್ಲಾ ರಿಯಾಯತುದ್ದೀನ್ ಅಲ್-ಮುಸ್ತಫಾ ಬಿಲ್ಲಾ ಷಾ ಅವರು ಮಲೇಷ್ಯಾದ ಎಲ್ಲ ಸಂಸದರೊಂದಿಗೆ ಸಭೆ ನಡೆಸಿ ಅಂತಿಮವಾಗಿ ಮುಹಿದ್ದೀನ್ ಯಾಸಿನ್ ರನ್ನು ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಇದೇ ಭಾನುವಾರ ಬೆಳಗ್ಗೆ 10.30ಕ್ಕೆ ಇಸ್ತಾನಾ ನೆಗರಾದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಅರಮನೆ ಹೇಳಿಕೆಯಲ್ಲಿ ತಿಳಿಸಲಾಗಿದೆ.

SCROLL FOR NEXT